ಇವತ್ತು ಫಸ್ಟ್ ರ‌್ಯಾಂಕ್ ರಾಜು ಹಾಗೂ ರಾಕೆಟ್ ಸಿನಿಮಾ ರಿಲೀಸ್

ಶುಕ್ರವಾರ, 27 ನವೆಂಬರ್ 2015 (10:42 IST)
ಇವತ್ತು ಕನ್ನಡ ಸಿನಿ ಪ್ರಿಯರಿಗೆ ಡಬಲ್ ಧಮಾಕ ಸಿಗಲಿದೆ. ಕನ್ನಡ ಬಹು ನಿರೀಕ್ಷಿ ಎರಡು ಸಿನಿಮಾಗಳು ಇವತ್ತು ರಿಲೀಸ್ ಆಗುತ್ತಿವೆ. ಅದರಲ್ಲಿ ಒಂದು ಸೈಬರ್ ಯುಗದೊಳ್ ಪ್ರೇಮ್ ಕಾವ್ಯ ಸಿನಿಮಾ ಖ್ಯಾತಿ ಗುರುನಂದನ್ ಅಭಿನಯಿಸಿರುವ ಫಸ್ಟ್ ರ‌್ಯಾಂಕ್ ರಾಜು ಹಾಗೂ ಇನ್ನೊಂದು ನೀನಾಸಂ ಸತೀಶ್ ನಿರ್ಮಿಸಿ ಅಭಿನಯಿಸಿರುವ ರಾಕೆಟ್.

ಫಸ್ಟ್ ರ್ಯಾಂಕ್ ಈಗಾಗಲೇ ಟ್ರೇಲರ್‌ನಿಂದ ಸಿನಿ ರಸಿಕರ ದಿಲ್ ಕದ್ದಿದೆ. ನರೇಶ್ ಅನ್ನೋ ನವಪ್ರತಿಭೆ ಈ ಸಿನಿಮಾವನ್ನು ನಿರ್ದೇಶಿಸಿದ್ದು,  ವಿದ್ಯೆ 100% ಬುದ್ಧಿ 0% ಎನ್ನುವ ಸಿನಿಮಾದ ಟ್ಯಾಗ್ ಲೈನ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಅಪೂರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜುಗೆ ಅಭಿಮಾನಿಗಳು ಎಷ್ಟು ಮಾರ್ಕ್ಸ್ ಕೊಡುತ್ತಾರೆ ಅನ್ನೋದು ಇವತ್ತು  ಸಂಜೆ ಹೊರ ಬೀಳೋ ಫಲಿತಾಂಶದಿಂದ ಗೊತ್ತಾಗಲಿದೆ.
 
ರಾಕೆಟ್ ಸಿನಿಮಾ ಕೂಡ ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಸಿನಿಮಾದ ಹಾಡುಗಳು ಈಗಗಾಲೇ ಅಭಿಮಾನಿಗಳಿಗೆ ಇಷ್ಟವಾಗಿದೆ. ವಾಸ್ತುಪ್ರಕಾರ ಸಿನಿಮಾದ ನಾಯಕಿ ಐಶಾನಿ ಶೆಟ್ಟಿ ಈ ಸಿನಿಮಾದಲ್ಲಿ ಸತೀಶ್‌ಗೆ ಸಾಥ್ ನೀಡಿದ್ದಾರೆ. ಇವತ್ತು ಥಿಯೇಟರ್ ಅಂಗಳಕ್ಕೆ ಬರುತ್ತಿರುವ ಈ ಸಿನಿಮಾಕ್ಕೆ ಪ್ರೇಕ್ಷಕರು ಏನ್ ಹೇಳ್ತಾರೆ ಅನ್ನೋದು ಸಂಜೆ ವೇಳೆಗೆ ಗೊತ್ತಾಗಲಿದೆ.

ವೆಬ್ದುನಿಯಾವನ್ನು ಓದಿ