ಒಂದೇ ಸಿನಿಮಾ, ಐವರು ನಿರ್ದೇಶಕರು! ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗ
ಬುಧವಾರ, 4 ನವೆಂಬರ್ 2020 (12:03 IST)
ಬೆಂಗಳೂರು: ಒಂದು ಸಿನಿಮಾಗೆ ಒಬ್ಬ ನಿರ್ದೇಶಕರಿರುವುದು ಸಾಮಾನ್ಯ. ಆದರೆ ಸ್ಯಾಂಡಲ್ ವುಡ್ ನಲ್ಲಿ ಈಗ ಹೊಸದೊಂದು ಪ್ರಯೋಗ ನಡೆಯುತ್ತಿದ್ದು, ಒಂದೇ ಸಿನಿಮಾಗೆ ಐವರು ಸ್ಟಾರ್ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ.
ನಿರ್ದೇಶಕರಾಗ ಯೋಗರಾಜ್ ಭಟ್, ಶಶಾಂಕ್, ಪವನ್ ಕುಮಾರ್, ಜಯತೀರ್ಥ, ಚೈತನ್ಯ ಒಂದೇ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದು ಕಮರ್ಷಿಯಲ್ ಸಿನಿಮಾವಾಗಿರಲಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ. ಕನ್ನಡ ಚಿತ್ರರಂಗದ ಪ್ರಸಕ್ತ ದಿಗ್ಗಜ ನಿರ್ದೇಶಕರು ಎನಿಸಿಕೊಂಡಿರುವ ಇವರೆಲ್ಲರೂ ಒಟ್ಟಾಗಿ ಸೇರಿ ಒಂದು ಸಿನಿಮಾ ಮಾಡಿದರೆ ಹೇಗಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲೂ ಇದೆ.