ಮದುವೆ ದಿನಾಂಕ ಘೋಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ

ಬುಧವಾರ, 4 ನವೆಂಬರ್ 2020 (09:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ರೀಲ್ ಲೈಫ್ ಜೋಡಿ ರಿಯಲ್ ಲೈಫ್ ನಲ್ಲೂ ಹಸೆಮಣೆಯೇರುವುದು ಪಕ್ಕಾ ಆಗಿದೆ. ನಟ, ನಿರ್ದೇಶಕ ಡಾರ್ಲಿಂಗ್ ಕೃ‍ಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ವಿವಾಹ ದಿನಾಂಕವನ್ನು ಘೋಷಿಸಿದ್ದಾರೆ.


ಇಬ್ಬರೂ ಹಲವು ಸಮಯದಿಂದ ಪ್ರೀತಿಸುತ್ತಿದ್ದಾರೆ. ಈಗಾಗಲೇ ತಮ್ಮ ಪ್ರೀತಿ ಸಂಬಂಧವನ್ನು ಬಹಿರಂಗಪಡಿಸಿದ್ದ ಜೋಡಿ ಮದುವೆ ದಿನ ಘೋಷಿಸಿರಲಿಲ್ಲ. ಇದೀಗ 2021 ರ ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಾಗಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸದ್ಯಕ್ಕೆ ಇಬ್ಬರೂ ಲವ್ ಮಾಕ್ ಟೈಲ್ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇದೆಲ್ಲಾ ಮುಗಿದ ಮೇಲೆ ಮದುವೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ