ಲೊಡ್ಡೆ ಸಿನಿಮಾ ಕಾಮಿಡಿ ಚಿತ್ರವಾದ್ರೂ ಈ ಸಿನಿಮಾದಲ್ಲಿ ಫೈಟ್, ರೊಮ್ಯಾನ್ಸ್ ಹೀಗೆ ಎಲ್ಲವೂ ಇದೆಯಂತೆ. ಹಾಗಾಗಿ ಸಿನಿಮಾಕ್ಕೆ ಅಭಿಮಾನಿಗಳು ಮನ ಸೋತಿದ್ದಾರಂತೆ. ಇನ್ನು ಸಿನಿಮಾದಲ್ಲಿ ಕೋಮಲ್ ಗೆ ಬಾಂಬೈ ಬೆಡಗಿ ಆಕಾಂಕ್ಷವ ಪುರಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಚೆನ್ನಾಗಿಯೇ ವರ್ಕ್ ಔಟ್ ಆಗಿದೆ.
ಇನ್ನು ಈ ಕಾಮಿಡಿ ಡ್ರಾಮಾವನ್ನು ಎಸ್.ವಿ. ಸುರೇಶ್ ನಿರ್ದೇಶಿಸಿದ್ದು, ಕೇವಲ ಕೋಮಲ್ ಫ್ಯಾನ್ಸ್ ಗ ಮಾತ್ರವಲ್ಲದೇ ವಿಷ್ಣು ಅಭಿಮಾನಿಗಳಿಗೂ ಈ ಸಿನಿಮಾ ಇಷ್ಟವಾಗಿದೆಯಂತೆ. ಹಾಗಾಗಿ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿ ಹೆಸರು ಮಾಡುತ್ತೆ ಅನ್ನೋ ಕುತೂಹಲ ಚಂದನವನದಲ್ಲಿ ಮನೆ ಮಾಡಿದೆ.