ಪವನ್ ಕಲ್ಯಾಣ್ ಗಬ್ಬರ್ ಸಿಂಗ್2 ಹೀರೋಯಿನ್ ಸಿಕ್ಕಳಂತೆ.. ಅವಳು ಯಾರೆಂದರೆ ....!

ಬುಧವಾರ, 22 ಅಕ್ಟೋಬರ್ 2014 (12:24 IST)
ಟಾಲಿವುಡ್‌ನ  ಬಾದಶಾ ಆಗಿರುವ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಗಬ್ಬರ್ ಸಿಂಗ್ 2 ರ ಬಗ್ಗೆ ಆಗಾಗ ಸುದ್ದಿ ಕೇಳಿ ಬರುತ್ತಿತ್ತು. ಅದಕ್ಕೆ ಕಾರಣ ಆ ಚಿತ್ರದ ಮೊದಲ ಭಾಗ ಸೂಪರ್ ಡೂಪರ್ ಹಿಟ್ ಆಗಿದ್ದು, ಅದರಿಂದ ಪ್ರೇರಿತರಾಗಿ ಚಿತ್ರದ ಎರಡನೇ ಭಾಗವನ್ನು ನಿರ್ಮಿಸುವತ್ತ ನಿರ್ಮಾಪಕರು ಗಮನ ನೀಡಿದ್ದರು 
 
ಆದರೆ ಆ ಚಿತ್ರದ ಬಗ್ಗೆ ಸುದ್ದಿ ಬರ್ತಾ ಇತ್ತೇ ವಿನಃ ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ಬಗೆಯ ಕೆಲಸಗಳು ಆಗಿದ್ದು ಮತ್ತು  ಆಗ್ತಾ ಇರುವ ಬಗ್ಗೆ ಕೇಳಿ ಬಂದಿರಲಿಲ್ಲ. ಅದರಲ್ಲೂ ಆ ಬಹು ನಿರೀಕ್ಷಿತ ಚಿತ್ರದ ಹೀರೋಯಿನ್ ಯಾರು ಎನ್ನುವುದರ ಬಗ್ಗೆ ಸಾಕಷ್ಟು ಗಮನ ಇತ್ತು.  
 
ಆ ಚಿತ್ರಕ್ಕೆ ಅನೇಕ ಹುಡುಗಿಯರ ಹೆಸರು ಕೇಳಿ ಬಂದಿದ್ದರು ಸಹ ಯಾವುದೇ ರೀತಿಯಲ್ಲೂ ಒಂದು ಸ್ಪಷ್ಟವಾದ ನಿರ್ಧಾರ ಪಡೆದಿರಲಿಲ್ಲ ಚಿತ್ರತಂಡ. ಆದರೆ ಈಗ  ಗಬ್ಬರ್ ಸಿಂಗ್ ಗೆ ಸಂಗಾತಿ ಸಿಕ್ಕಿದ್ದಾಳೆ. ಆಕೆಯೇ ರಕುಲ್ ಪ್ರೀತ್ ಸಿಂಗ್. ಈಕೆ ಟಾಲಿವುಡ್ ನ ಲೀಡ್ ನಟಿಯರಲ್ಲಿ ಒಬ್ಬಳು. ಆಕೆ ಬಗ್ಗೆ ಹೇಳೋದೇ ಆದ್ರೆ ಈಗಾಗಲೇ ವೆಂಕಟಾದ್ರಿ ಎಕ್ಸ್ ಪ್ರೆಸ್ ಎನ್ನುವ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆದವಳು ಲೌಕ್ಯಂ ಚಿತ್ರದಲ್ಲಿ ನಟಿಸಿ ಎರಡು  ಸಿನಿಮಾಗಳಲಿಂದಲೂ ಒಳ್ಳೆಯ ಫಲಿತಾಂಶ ನೀಡಿದ್ದಾಳೆ. ಆ ಚಿತ್ರಸೀಮೆಯ ಭರವಸೆ ಆಗಿರುವ ರಕುಲ್ ಈಗ ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದು ಕೊಂಡಿದ್ದಾಳೆ. 
 
ಪ್ರಸ್ತುತ ಪವನ್ ಗೋಪಾಲ ಗೋಪಾಲ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅದೇ ರೀತಿ ರಕುಲ್ ಹಿಂದಿ ಚಿತ್ರದಲ್ಲಿ. ತೆಲುಗು  ಚಿತ್ರಕ್ಕೆ ರಕುಲ್ ಕಡೆಯಿಂದ ಸಮ್ಮತಿ ಮುದ್ರೆ ಸಿಕ್ಕ ಕಾರಣ ಸಿನಿಮಾ ಶೂಟಿಂಗ್ ಡಿಸೆಂಬರ್ ತಿಂಗಳಿಂದ ಆರಂಭ ಆಗುತ್ತದೆ ಎಂದಿದೆ  ಮೂಲಗಳು..ಇಷ್ಟುದಿನ ಗಬ್ಬರ್ ಸಿಂಗ್ ಗಬ್ಬರ್ ಸಿಂಗ್ ಅಂತ ಹಾಡ್ತಾ ಇದ್ದ ಅಭಿಮಾನಿಗಳು ಇನ್ನು ಮುಂದೆ ರಕುಲ್ ಸಿಂಗ್ ರಕುಲ್ ಸಿಂಗ್ ಎಂದು ಹಾಡ್ತಾರೆ!
 

ವೆಬ್ದುನಿಯಾವನ್ನು ಓದಿ