ಲಾಕ್ ಡೌನ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಶೂಟಿಂಗ್ ಮಾಡಲಿರುವ ಮೊದಲ ಸಿನಿಮಾ ಇದೇ
ಭಾನುವಾರ, 20 ಸೆಪ್ಟಂಬರ್ 2020 (09:13 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಮತ್ತೆ ಚಿತ್ರರಂಗ ಮೊದಲಿನ ಸ್ಥಿತಿಗೆ ಬರುತ್ತಿದೆ. ಚಿತ್ರಮಂದಿರ ತೆರೆಯದಿದ್ದರೂ ಶೂಟಿಂಗ್, ತೆರೆಮರೆಯ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ.
ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಲಾಕ್ ಡೌನ್ ಬಳಿಕ ಮೊದಲ ಸಿನಿಮಾ ಶೂಟಿಂಗ್ ಗೆ ಸಜ್ಜಾಗಿದ್ದಾರೆ. ಗಣಿ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಅಕ್ಟೋಬರ್ 6 ರಿಂದ ಶೂಟಿಂಗ್ ಆರಂಭಿಸಲಿದೆ. ಈ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದು, ರಂಗಾಯಣ ರಘು, ಸಾಧು ಕೋಕಿಲ, ರವಿಶಂಕರ್ ಗೌಡ ಮತ್ತಿತರರು ಅಭಿನಯಿಸುತ್ತಿದ್ದಾರೆ.