ಮದಗಜ ಶೂಟಿಂಗ್ ಶುರು ಮಾಡಿಕೊಂಡ ಶ್ರೀಮುರಳಿ

ಭಾನುವಾರ, 20 ಸೆಪ್ಟಂಬರ್ 2020 (09:02 IST)
ಬೆಂಗಳೂರು: ಲಾಕ್ ಡೌನ್ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡಿದ್ದಾರೆ.


ಮುರಳಿ ಅಭಿನಯದ ‘ಮದಗಜ’ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ಆರಂಭವಾಗಿದ್ದು, ಬಹಳ ದಿನಗಳ ನಂತರ ಮೇಕ್ ಅಪ್ ಮಾಡಿಸಿಕೊಂಡ ಖುಷಿಯಲ್ಲಿ ಮುರಳಿ ಇದ್ದಾರೆ. ಮೊನ್ನೆಯಷ್ಟೇ ಮಕ್ಕಳನ್ನು ಬಿಟ್ಟು ಶೂಟಿಂಗ್ ತೆರಳುವ ಪ್ರಯಾಸದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುರಳಿ ಬರೆದುಕೊಂಡಿದ್ದರು. ಮದಗಜ ಸಿನಿಮಾದ ಮೊದಲ ಭಾಗ ಚಿತ್ರೀಕರಣವಾಗಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ