'ಕನ್ವರ್ಲಾಲ್ ಕಮಾಲ್'ನಲ್ಲಿ ನಟಿಸಲು ಗಣೇಶ್ ನಕಾರ: ದೂರು ದಾಖಲು

ಶನಿವಾರ, 31 ಜನವರಿ 2015 (09:51 IST)
ನಿರ್ದೇಶಕ ದಿನೇಶ್ ಗಾಂಧಿ ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ನಿರ್ಮಾಪಕರ ಸಂಘದಲ್ಲಿ ದೂರು ದಾಖಲು ಮಾಡಿದ್ದಾರೆ. ಕನ್ವಾರ್ ಲಾಲ್ ಎನ್ನುವ ಚಿತ್ರದಲ್ಲಿ ಅವರು ನಟಿಸಲು ಒಪ್ಪುತ್ತಿಲ್ಲ ಎನ್ನುವ ಕಾರಣದಿಂದ ಈ ರೀತಿ ದೂರು ಸಲ್ಲಿಸಿದ್ದಾರೆ ಗಾಂಧಿ.

ಈ ಮೊದಲು ಈ ಚಿತ್ರಕ್ಕೆ ಆಯ್ಕೆಯಾದ ಗಣೇಶ ಕೆಲವು ತಿಂಗಳುಗಳ ಹಿಂದೆ ಅದಕ್ಕೆ ಮುಂಗಡ ಹಣವನ್ನು ಪಡೆದಿದ್ದರು. ಆದರೆ ಅನೇಕ ಕಾರಣಗಳಿಂದ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗದೆ ಇರುವುದರಿಂದ ಆತೀಗ ಮುಂಗಡ ಹಣ ವಾಪಾಸು ಮಾಡುವುದಾಗಿ ಹೇಳಿದ್ದರು ಸಹಿತ ದಿನೇಶ್ ಗಾಂಧಿ ಇದಕ್ಕೆ ಸಮ್ಮತಿ ತೋರುತ್ತಿಲ್ಲ, ಬದಲಾಗಿ ಅವರು ದೂರು ಸಲ್ಲಿಸಿದ್ದಾರೆ. ನಿರ್ಮಾಪಕರಾಗಿ ಅವರು ಹಿಂದಿಯ ದಬಾಂಗ್‌ನ ರೀಮೇಕ್ ಮಾಡಲು ಅದರ ನಿರ್ಮಾಪಕ ಅರ್ಬಾಜ್ ಖಾನ್ ಅವರಿಗೆ 43,00,000 ಮೊತ್ತ ನೀಡಿ ರೀಮೇಕ್ ಹಕ್ಕುಗಳನ್ನು ಕೊಂಡಿದ್ದರು. ಆರಂಭದಲ್ಲಿ 22,50,000 ನೀಡಿದ್ದರು, ಒಟ್ಟಾರೆ  ರೀಮೇಕ್ ಹಕ್ಕು 1.25  ಮೊತ್ತ ಕೋಟಿ ರೂಗಳು.

ಈ ಚಿತ್ರವನ್ನು ಎಂ ಡಿ ಶ್ರೀಧರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಶ್ರೀಧರ್ ಅವರ ನಿರ್ದೇಶನದ  ಬುಗುರಿ ಚಿತ್ರದ ನಟನೆಯ ಬಳಿಕ ಹೊಸ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದ ಗಣೇಶ್ ಆ ಬಳಿಕ ಕನ್ವರ್ಲಾಲ್ ಕಡೆ ಕಣ್ಣೆತ್ತಿ ನೋಡಿರಲಿಲ್ಲ. ಆದರೆ ಅದಾದ ಬಳಿಕ ಗಣೇಶ್ ಸ್ಟೈಲ್ ಕಿಂಗ್   ಮತ್ತು ಜೂಮ್ ಚಿತ್ರಗಳ ನಟನೆಗೆ ಆದ್ಯತೆ ನೀಡಿದರು. ನಿಜವೆಂದರೆ ಗಣೇಶ್ ಜನವರಿ 16 ರಿಂದ ತಾವು ಈ ಚಿತ್ರದಲ್ಲಿ ಭಾಗವಹಿಸುವುದಾಗಿ ಹೇಳಿದ್ದರಂತೆ. ಇದರಿಂದ ಸಿಟ್ಟಿಗೆದ್ದ ದಿನೇಶ್ ಗಾಂಧಿ ನ್ಯಾಯ ಪಡೆಯಲು ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಅವರವರ ಕಷ್ಟ ಅವರವರಿಗೆ !

ವೆಬ್ದುನಿಯಾವನ್ನು ಓದಿ