’ಗಾಳಿಪಟ 2’ ಹಾರಿಸಲಿರುವ ಯೋಗರಾಜ್ ಭಟ್-ಗಣೇಶ್

ಬುಧವಾರ, 4 ಜನವರಿ 2017 (11:08 IST)
ಒಂದು ಚಿತ್ರ ಯಶಸ್ವಿಯಾದರೆ ಅದರ ಎಳೆಯನ್ನೇ ಇಟ್ಟುಕೊಂಡು ಇನ್ನೊಂದು ಚಿತ್ರ ಮಾಡುವುದು ಈಗ ಹೊಸ ಟ್ರೆಂಡ್. ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಮುಂಗಾರು ಮಳೆ ತೆರೆಕಂಡು ಹತ್ತು ವರ್ಷಗಳಾಗಿವೆ. ಈಗ ಈ ಜೋಡಿ ’ಮುಗುಳು ನಗೆ’ ಸಿನಿಮಾ ಮಾಡುತ್ತಿದೆ. 
 
 ಇವರಿಬ್ಬರ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದು. ಈ ಹಿಂದೆ ಇದೇ ಜೋಡಿ ’ಗಾಳಿಪಟ’ ಸಿನಿಮಾ ಹಾರಿಬಿಟ್ಟಿತ್ತು. ಇದೀಗ ಗಾಳಿಪಟ 2 ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊನ್ನೆ ಮುಂಗಾರು ಮಳೆ ಹತ್ತು ವರ್ಷಗಳ ಸಂಭ್ರಮದಲ್ಲಿ ಯೋಗರಾಜ್ ಭಟ್ ಈ ಸುಳಿವು ನೀಡಿದ್ದಾರೆ.
 
ಈಗಿನ್ನೂ ಮಾತುಕತೆ ನಡೆಯುತ್ತಿದೆ. ತಂಡದಲ್ಲಿ ಮುಗುಳು ನಗೆ ನಿರ್ಮಾಪಕರು, ಯೋಗರಾಜ್ ಭಟ್ ಸಹ ಇರುತ್ತಾರೆ.  ಇನ್ನೂ ಕಥೆ, ಚಿತ್ರಕಥೆ ಬಗ್ಗೆ ಇನ್ನಷ್ಟೇ ಕೂರಬೇಕು ಎನ್ನುತ್ತಿದೆ ಚಿತ್ರತಂಡ. ಇನ್ನು ಮುಗುಳು ನಗೆ ಚಿತ್ರ ಬೇಸಿಗೆ ರಜೆಗೆ ಪ್ರೇಕ್ಷಕರ ಮುಂದೆ ಬರುವ ನಿರೇಕ್ಷೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ