ಪೂಜಾ ಗಾಂಧಿ ಮುಂದಿನ ಚಿತ್ರದ ಶೀರ್ಷಿಕೆ ಜಿಲೇಬಿ

ಮಂಗಳವಾರ, 30 ಜೂನ್ 2015 (10:25 IST)
ಕನ್ನಡದ ಹಿರಿಯನಟಿ ದಿವಂಗತ ಕಲ್ಪನಾ ಜೀವನ ಚರಿತ್ರೆ ಎಂದು ಹೇಳಿ ಸಾಕಷ್ಟು ವಿವಾದಕ್ಕೆ ಈಡಾದ ಪೂಜಾ ಗಾಂಧಿ ಚಿತ್ರ ಅಭಿನೇತ್ರಿ. ಆ ಚಿತ್ರ ಆರಂಭದಿಂದಲೂ ವಿವಾದದ ಹೊಡತಕ್ಕೆ ಸಿಕ್ಕು ನಲುಗಿ, ಆ  ಬಳಿಕ ಬಿಡುಗಡೆಯಾದರೂ ವಿವಾದದಷ್ಟು ಹೆಸರು ಮಾಡಲಿಲ್ಲ ಅನ್ನೋದು ಬೇರೆ ಸಂಗತಿ. ಈಗ ನಾವು ಪೂಜಾ ಕಡೆ ಯಾಕೆ ಹೊರಟಿದ್ದೀವಿ ಎಂದರೆ ಈ ತಾರೆ ಹೊಸ ಚಿತ್ರದ ಹೆಸರು ನಿಕ್ಕಿಯಾಗಿದೆ. ಜಿಲೇಬಿ ಆ ಚಿತ್ರದ ಶೀರ್ಷಿಕೆ. ಲಕ್ಕಿ ಶಂಕರ್ ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. 
ಇದರಲ್ಲಿ ಪೂಜಾ ಅವರು ಭಿನ್ನ ರೀತಿಯ ಪಾತ್ರಗಳಲ್ಲಿ ಕಂಡು ಬರುತ್ತಿದ್ದಾರಂತೆ. ಇದು ಸಂಪೂರ್ಣವಾಗಿ ಹಾಸ್ಯ ಪ್ರಧಾನ ಚಿತ್ರವಾಗಿದೆಯಂತೆ. ಇದರಲ್ಲಿ ಅನೇಕ ಮುಖ್ಯ ನಟರು ಅತಿಮುಖ್ಯ ಪಾತ್ರಗಳಲ್ಲಿ ಕಂಡು ಬರುತ್ತಿದ್ದಾರಂತೆ.ಶಿವಶಂಕರ್ ಫಿಲಿಮ್ಸ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆ ಈಗಾಗಲೇ ದೇವರಾಣೆ  ಮತ್ತು ಸಿಗರೇಟ್ ಚಿತ್ರಗಳಿಗೆ ಹಣ ಹೂಡಿದ್ದಾರೆ. ಈಗ ಜಿಲೇಬಿಗೆ ಮನಸೋತಿದ್ದಾರೆ. 

ವೆಬ್ದುನಿಯಾವನ್ನು ಓದಿ