ಗೋಲ್ಡನ್ ಸ್ಟಾರ್ ಕೈಗೆ ಆರೆಂಜ್ ಕೊಟ್ಟ ಪ್ರಶಾಂತ್ ರಾಜ್

ಭಾನುವಾರ, 12 ಫೆಬ್ರವರಿ 2017 (06:13 IST)
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಒಂದಾಗಿದ್ದಾರೆ. 2016ರಲ್ಲಿ ’ಜೂಮ್’ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ ಈ ಜೋಡಿ ಈಗ ಇನ್ನೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
 
ಚಿತ್ರಕ್ಕೆ ’ಆರೆಂಜ್’ ಎಂದು ಹೆಸರಿಟ್ಟಿದ್ದು ಶಿರಡಿಯಲ್ಲಿ ಶನಿವಾರ ಟೈಟಲ್ ಲಾಂಚ್ ಮಾಡಿದ್ದಾರೆ ಪ್ರಶಾಂತ್ ರಾಜ್. ಈ ಸಂದರ್ಭದಲ್ಲಿ ಗಣೇಶ್ ಮತ್ತವರ ಪತ್ನಿ ಶಿಲ್ಪಾ ಸಹ ಉಪಸ್ಥಿತರಿದ್ದರು. ವಿಶೇಷ ಎಂದರೆ ಅವರಿಬ್ಬರದು ಮದುವೆ ವಾರ್ಷಿಕೋತ್ಸವದ ದಿನವೇ ಚಿತ್ರ ಸೆಟ್ಟೇರಿರುವುದು. 
 
ಈ ಚಿತ್ರವನ್ನು ನಿಮ್ಮ ಸಿನಿಮಾ ಬ್ಯಾನಲ್ ಲಾಂಛನದಲ್ಲಿ ನವೀನ್ ಜಿಎಸ್ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಟೈಟಲ್ ಅಷ್ಟೇ ಲಾಂಚ್ ಆಗಿದ್ದು ಶೀಘ್ರದಲ್ಲೆ ಚಿತ್ರೀಕರಣ ಸಹ ಆರಂಭಿಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ