ಅಮೂಲ್ಯಾ, ಆಶಿಕಾ ಮತ್ತು ನಿಖಿತಾ ನಾರಾಯಣ್ ಚಿತ್ರದ ನಾಯಕಿಯರು. 'ರೋಮಿಯೋ' ಖ್ಯಾತಿಯ ಭಾವನಾ ರಾವ್ ಅತಿಥಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಗುಳು ನಗೆ'ಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪ್ರೀತಿಯ ವಿಭಿನ್ನ ಹಂತಗಳನ್ನು ಹೇಳಲಿದ್ದು, 'ನಗುವಿನ' ಮೇಲೆಯೇ ಸಿನೆಮಾ ಚಲಿಸಲಿದೆಯಂತೆ. "ಇಂದು, ಪ್ರೀತಿಯ ಬಗೆಗೆ ಪುರುಷನ ದೃಷ್ಟಿಕೋನ ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ. ಇದನ್ನು ಈ ಸಿನೆಮಾದಲ್ಲಿ ನಾವು ಹುಡುಕಲಿದ್ದೇವೆ" ಎಂದಿದ್ದಾರೆ.