ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಇಂದು ವಿಶೇಷ ದಿನ. ಗೋಲ್ಡನ್ ದಂಪತಿ ಖುಷಿ ಪಡಲು ಒಂದು ಕಾರಣವೂ ಇದೆ.
ಇಂದು ಗಣೇಶ್ ಪುತ್ರ ವಿಹಾನ್ ಜನ್ಮದಿನವಾಗಿದ್ದು, ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಸಾಮಾಜಿಕ ಜಾಲತಾಣದ ಮೂಲಕ ಪುತ್ರನಿಗೆ ಭಾವುಕ ಸಂದೇಶ ಬರೆದು ಶುಭ ಕೋರಿದ್ದಾರೆ. ವಿಹಾನ್ ಗಣೇಶ್ ‘ಗೀತಾ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಾಲ ನಟನಾಗಿ ಎಂಟ್ರಿಕೊಟ್ಟಿದ್ದಾರೆ. ಸ್ಮೈಲ್, ಸ್ಟೈಲ್ ನಲ್ಲಿ ಥೇಟ್ ಅಪ್ಪನ ಹೋಲುವ ಮುದ್ದು ಮೊಗದ ಜ್ಯೂನಿಯರ್ ಗೋಲ್ಡನ್ ಸ್ಟಾರ್ ಗೆ ಅಭಿಮಾನಿಗಳೂ ಶುಭ ಕೋರುತ್ತಿದ್ದಾರೆ.