ಜಿಎಸ್ ಟಿ ವಿರೋಧಿಸಿ ತಮಿಳು ಚಿತ್ರಮಂದಿರಗಳು ಬಂದ್

ಶನಿವಾರ, 1 ಜುಲೈ 2017 (11:05 IST)
ಚೆನ್ನೈ: ದೇಶಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿ ಮಾಡಿರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಇಂದು ಬಂದ್ ಆಚರಿಸುತ್ತಿವೆ

 
ಜಿಎಸ್ ಟಿ ಸೇವಾ ತೆರಿಗೆಯಿಂದ ತಮಿಳು ಚಿತ್ರೋದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಇದನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ. ಸುಮಾರು 120 ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್ ನಲ್ಲಿ ಪಾಲ್ಗೊಂಡಿದೆ

ಇತ್ತ ಕನ್ನಡ ಚಿತ್ರರಂಗದಲ್ಲೂ ವಿರೋಧದ  ಅಲೆ ಕೇಳಿಬಂದಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಮೋದಿ ಸರ್ಕಾರ ದಕ್ಷಿಣ ಭಾರತೀಯ ಸಿನಿಮಾಗಳನ್ನು ತುಳಿಯುತ್ತಿದ್ದಾರೆ. ಸೇವಾ ತೆರಿಗೆಯಿಂದ ಹಿಂದಿ ಚಿತ್ರೋಧ್ಯಮ ಉಳಿಯಬಹುದು. ಆದರೆ ಪ್ರಾದೇಶಿಕ ಚಿತ್ರರಂಗಕ್ಕೆ ಹೊಡೆತ ತಪ್ಪಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ