ಚೆಕ್‌ ಬೌನ್ಸ್‌ ಕೇಸ್‌ನಲ್ಲಿ ಸಿಲುಕಿದ್ದ ಗುರು ಪ್ರಸಾದ್‌ಗೆ ಇದೇ 19ಕ್ಕೆ ಕೋರ್ಟ್‌ ವಿಚಾರಣೆಯಿತ್ತು

Sampriya

ಸೋಮವಾರ, 4 ನವೆಂಬರ್ 2024 (17:26 IST)
ಆತ್ಮಹತ್ಯೆಗೆ ಶರಣಾಗಿರುವ ಕನ್ನಡದ ಖ್ಯಾತ  ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವಿಪರೀತ ಸಾಲದಿಂದ, ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಅವರು ಸಾವಿನ ಮೊರೆ ಹೋದರು ಎಂದು ತಿಳಿದುಬಂದಿದೆ.

ಗುರು ಪ್ರಸಾದ್ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ. ಅವರು ದುಡುಕಿನ ನಿರ್ಧಾರ ಮಾಡಿದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಗುರುಪ್ರಸಾದ್ ಅವರ ಚೆಕ್​ಬೌನ್ಸ್ ಪ್ರಕರಣದ ಬಗ್ಗೆ ಚರ್ಚೆ ನಡೆದಿದೆ.

ಇನ್ನೂ ಗುರು ಪ್ರಸಾದ್ ಅವರು ವಿ. ಶ್ರೀನಿವಾಸ್ ಅವರಿಗೆ 30 ಲಕ್ಷ ರೂಪಾಯಿ ಹಣವನ್ನು ನೀಡಬೇಕಿತ್ತು.  ಗುರುಪ್ರಸಾದ್ ಈ ಮೊದಲು ನೀಡಿದ್ದ ಚೆಕ್​ಗಳು ಬೌನ್ಸ್ ಆಗಿದ್ದವು. ಹೀಗಾಗಿ, ಶ್ರೀನಿವಾಸ್ ಅವರು ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣ ಸಂಬಂಧ ಅಕ್ಟೋಬರ್‌ 22ರಂದು ಗುರುಪ್ರಸಾದ್‌ ಕೋರ್ಟ್‌ಗೆ ಹಾಜರಾಗಬೇಕಿತ್ತು.  ಆದರೆ ಅನಾರೋಗ್ಯದ ಕಾರಣ ಹೇಳಿದ್ದ ಗುರುಪ್ರಸಾದ್ ಅವರು ಮೆಡಿಕಲ್ ಸರ್ಟಿಫಿಕೇಟ್ ಕೂಡ ನೀಡಿದ್ದರು.

ಮತ್ತೇ ಇದೇ ತಿಂಗಳು ನವೆಂಬರ್ 19ಕ್ಕೆ ಮುಂದಿನ ವಿಚಾರಣೆ ಇತ್ತು. ಸದ್ಯದಲ್ಲೇ ಕೋರ್ಟ್​ನಲ್ಲಿ ಕೇಸ್ ಮುಗಿದು ಶ್ರೀನಿವಾಸ್ ಪರ ತೀರ್ಪು ಬರುವ ಎಲ್ಲಾ ಸಾಧ್ಯತೆ ಇತ್ತು ಎನ್ನಲಾಗಿದೆ. ಈಗಾಗಲೇ ಹಲವು ಬಾರಿ ಕೋರ್ಟ್​​ಗೆ ಬಾರದೆ ಗುರುಪ್ರಸಾದ್ ಅವರು ತಪ್ಪಿಸಿಕೊಂಡಿದ್ದರು. ಸದ್ಯದಲ್ಲೇ ಮತ್ತೊಮ್ಮೆ ಅರೆಸ್ಟ್ ವಾರಂಟ್ ಜಾರಿ ಆಗುವ ಸಾಧ್ಯತೆಗಳಿದ್ದರು.

ಹೀಗೇ ಗುರುಪ್ರಸಾದ್ ಅವರು ಮೂರು ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ