ನಾವೆಲ್ಲಾ ಸೂಸೈಡ್ ಮಾಡ್ಬೇಕಾ? ನಿರ್ಮಾಪಕ ಗುರುದೇಶ್ ಪಾಂಡೆ ಆಕ್ರೋಶ

ಗುರುವಾರ, 23 ಡಿಸೆಂಬರ್ 2021 (09:45 IST)
ಬೆಂಗಳೂರು: ಡಿಸೆಂಬರ್ 31 ಕ್ಕೆ ಕನ್ನಡ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿರುವುದಕ್ಕೆ ನಿರ್ಮಾಪಕ ಗುರುದೇಶ್ ಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 31 ‍ಕ್ಕೆ ಲವ್ ಯೂ ರಚ್ಚು ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳಲಾಗಿದೆ. ಆದರೆ ಇದೇ ದಿನ ಬಂದ್ ಮಾಡಿದರೆ ಚಿತ್ರಕ್ಕೆ ತೊಂದರೆಯಾಗುತ್ತದೆ ಎನ್ನುವುದು ಗುರುದೇಶ್ ಪಾಂಡೆ ಆಕ್ರೋಶಕ್ಕೆ ಕಾರಣ.

’31 ಕ್ಕೆ ನಾವೆಲ್ಲಾ ಸೂಸೈಡ್ ಮಾಡ್ಕೋಬೇಕಾ? ಶುಕ್ರವಾರ ಬಂದ್ ಮಾಡ್ತೀವಿ ಅಂತಾರೆ. ಅಷ್ಟು ಗೊತ್ತಾಗಲ್ವಾ ಇವರಿಗೆ? ಈ ದಿನ ಬಂದ್ ಮಾಡಿದರೆ ಎಷ್ಟು ಕೋಟಿ ಲಾಸ್ ಆಗುತ್ತೆ? ಇದರ ಬಗ್ಗೆ ಯೋಚನೆ ಮಾಡೋದು ಬೇಡ್ವಾ? ಮೊದಲೇ ನಮ್ ಹೀರೋ ಸಪೋರ್ಟ್ ಮಾಡ್ತಿಲ್ಲ, ಬಂದ್ ಅಂತಾರೆ ಇದೆಲ್ಲದರ ನಡುವೆ ನಮ್ಮ ಸಿನಿಮಾ ಓಡೋದು ಹೇಗೆ. ಏನು ಮಾಡಬೇಕು ಗೊತ್ತಾಗ್ತಿಲ್ಲ’ ಎಂದು ಗುರುದೇಶ್ ಪಾಂಡೆ ಸಾ ರಾ ಗೋವಿಂದು ಮತ್ತು ಬಂದ್ ಬೆಂಬಲಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ