ಕಿಚ್ಚ ಸುದೀಪ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ - ಹನ್ಸಿಕಾ ಮೋಟ್ವಾನಿ

ಶುಕ್ರವಾರ, 18 ಜುಲೈ 2014 (11:37 IST)
ಪವನ್ ಕಲ್ಯಾಣ್ ಸಿನಿಮಾದಲ್ಲಿ ಹನ್ಸಿಕ ನಟಿಸುತ್ತಿಲ್ಲ ಹಾಗಂತ ಯಾವ ಸಿನಿಮಾ ಎಂದು ಕೇಳ ಬೇಡಿ ತೆಲುಗು ಪವನ್ ಅವರ ಕನ್ನಡ  ರೀಮೇಕ್ ಚಿತ್ರದಲ್ಲಿ ಕಿಚ್ಚ ನಟಿಸುತ್ತಾ ಇರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಚಿತ್ರದಲ್ಲಿ ಹನ್ಸಿಕಾ ಮುಖ್ಯ ಪಾತ್ರಧಾರಿ ಆಗಿದ್ದಾಳೆ ಎನ್ನುವ ಸುದ್ದಿಯನ್ನು ಮಾಧ್ಯಮಗಳು ಹೇಳಿದ್ದವು. 

ಆ ವಿಷಯಕ್ಕೆ ಸಂಬಂಧಪಟ್ಟಂತೆ ಆಕೆಯು ಸಹ ಯಾವುದೇ ರೀತಿಯಲ್ಲೂ  ಪ್ರತಿಕ್ರಿಯೆ ತೋರದ ಕಾರಣ ನಟಿಸುವುದ ನಿಜ ಅಂತ ಮಾಧ್ಯಮಗಳು ತಿಳಿದಿದ್ದವು, ಆದರೆ ಆಕೆ ಇಲ್ಲ ನೋ ಕನ್ನಡ ನೋ ಆಕ್ಟಿಂಗ್ ಅಂತ ಹೇಳಿ ಬಿಟ್ಟಿದ್ದಾಳೆ. ಸೊ ಕಿಚ್ಚ ಅವರ ಜೊತೆ ನಟಿಸುವ ಅವಕಾಶ ದೂರ ಮಾಡಿಕೊಂಡಿದ್ದಾಳೆ ಈ ಮುಂಬೈ ಮೂಲದ ಹುಡುಗಿ! 
ಒಳ್ಳೆಯ ಅವಕಾಶ ಮಿಸ್ ಮಾಡಿಕೊಂಡಿದ್ದಾಳೆ ಎಂದು  ದಕ್ಷಿಣ   ಭಾರತದ ಸಿನಿಮಾ ಮಂದಿಯ ಅನಿಸಿಕೆ. ಕಾಲಿವುಡ್ ನಲ್ಲಿ ಹೆಸರು ಮಾಡಿರುವ ಈಕೆ ಕನ್ನಡದಲ್ಲಿ ಸಿಕ್ಕ ಒಳ್ಳೆಯ ಅವಕಾಶವನ್ನು ಹೀಗೆ ದೂರ ಮಾಡಿಕೊಂಡಿದ್ದಾಳೆ.
 
ಈ ಸುದ್ದಿ ಜೊತೆ ಮತ್ತೊಂದು ಸಂಗತಿ ಇದೆ ಅತ್ತಾರಿಂಟಿಕಿ.... ಚಿತ್ರದ ಬಗ್ಗೆ. ಈ ಸಿನಿಮಾಕ್ಕೆ ಈಗ ಸೈಮಾ (ಸೌತ್ ಇಂಡಿಯನ್ ಮೂವಿ ಅವಾರ್ಡ್ಸ್ ) 2014 ರಲ್ಲಿ 12 ನಾಮಿನೆಶನ್ ದೊರಕಿದೆ. ಹೀರೋ ಹೀರೋಯಿನ್ ಗಳಾದ ಪವನ್ ಮತ್ತು ಸಮಂತ ಅವರಿಗೆ ಉತ್ತಮ ನಟ ನಟಿಯ ವಿಭಾಗಕ್ಕೆ ನಾಮಿನೇಟ್ ಆಗಿದ್ದಾರಂತೆ!
 
ಪ್ರತಿವರ್ಷ ದಕ್ಷಿಣ ಭಾರತ ಚಿತ್ರರಂಗಗಳಾದ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರರಂಗದ ಚಿತ್ರಗಳಿಗೆ ಆ ಅವಾರ್ಡ್ ನೀಡಲಾಗುತ್ತದೆ. ಈ ಕಾರ್ಯಕ್ರಮ ಮಲೇಷಿಯಾದ ಕೌಲಾಲಂಪುರ್ ನಲ್ಲಿ ನಡೆಯುತ್ತದೆ . 

ವೆಬ್ದುನಿಯಾವನ್ನು ಓದಿ