ನಟ ಶಿವರಾಜ್ ಕುಮಾರ್ ಗೆ ಇಂದು ಡಬಲ್ ಸಂಭ್ರಮ

ಮಂಗಳವಾರ, 19 ಮೇ 2020 (09:37 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ವೈಯಕ್ತಿಕ ಮತ್ತು ವೃತ್ತಿ ಬದುಕಿನ ವಿಶೇಷ ದಿನದ ಖುಷಿಯಲ್ಲಿದ್ದಾರೆ.


ಇಂದು ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಇದು ಅವರ ವೈಯಕ್ತಿಕ ಜೀವನದ ಖುಷಿ.

ಇದರ ಜತೆಗೆ ಓಂ ಸಿನಿಮಾದ 25 ನೇ ವರ್ಷದ ಸಂಭ್ರಮಾಚರಣೆಯೂ ಇಂದು ನಡೆಯುತ್ತಿದೆ. ಇಂದು ಸಂಜೆ 7.30 ಕ್ಕೆ ಓಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಜತೆಗೆ ಶಿವಣ್ಣ ಫೇಸ್ ಬುಕ್ ನಲ್ಲಿ ಲೈವ್ ಬರಲಿದ್ದು, ಆ ದಿನಗಳ ಮೆಲುಕು ಹಾಕಲಿದ್ದಾರೆ. ಈ ಸಂದರ್ಭದಲ್ಲಿ ಈ ದಿಗ್ಗಜ ಜೋಡಿ ಜತೆ ಅಭಿಮಾನಿಗಳೂ ಚ್ಯಾಟ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ