ಪ್ರಶಸ್ತಿ ಆಯ್ಕೆಯೂ ವ್ಯವಹಾರವಾಗಿಬಿಟ್ಟಿದೆ: ಚಿತ್ರೋದ್ಯಮಗಳ ಕಟು ಸತ್ಯ ಬಿಚ್ಚಿಟ್ದ ಹರಿಪ್ರಿಯಾ

ಶನಿವಾರ, 15 ಏಪ್ರಿಲ್ 2017 (13:08 IST)
ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಕುರಿತಂತೆ ನೀರ್ ದೋಸೆ ಖ್ಯಾತಿಯ ಕನ್ನಡದ ನಟಿ ಹರಿಪ್ರಿಯಾ ಫೇಸ್ಬುಕ್`ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾದ ವೇದಿಕೆಗಳು ಆತ್ಮಸ್ಥೈರ್ಯ ಕುಂದಿಸಬಾರದು ಎನ್ನುವ ಮೂಲಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರಶಸ್ತಿಗಳ ಆಯ್ಕೆ ಹೇಗೆ ನಡೆಯುತ್ತವೆ ಎಂಬುದು ನನಗೆ ಗೊತ್ತಿದೆ. ಜೂರಿಗಳನ್ನ ಪರಿಚಯ ಮಾಡಿಕೊಳ್ಳಬೇಕು. ಅವರ ಜೊತೆ ಸಂಪರ್ಕದಲ್ಲಿರಬೇಕು. ಪ್ರತೀ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅವರನ್ನ ಫಾಲೋ ಮಾಡಬೇಕು. ಹೀಗೆ ಉದ್ಯಮದ ಒಳ-ಹೊರಗುಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಯಾವುದೇ ಪ್ರಶಸ್ತಿ ಪಡೆಯದ ಬಗ್ಗೆ ನನಗೆ ಬೇಸರವಿಲ್ಲ. ಪ್ರಶಸ್ತಿ ಆಯ್ಕೆಗಳು ನೈಜವಾಗಿರುವುದಿಲ್ಲ, ಅವುಗಳು ಪ್ರತಿಭೆಗಳನ್ನ ಗುರ್ತಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ ಅಂದ ಮೇಲೆ ನಾವ್ಯಾಕೆ ಅಂತಹ ಪ್ರಶಸ್ತಿ ವೇದಿಕೆಗಳನ್ನ ಇಟ್ಟುಕೊಂಡಿದ್ದೇವೆ..? ಅದೂ ಕೂಡ ಒಂದು ವ್ಯವಹಾರವಾಗಿರುವುದು ದುಃಖದ ಸಂಗತಿ ಎಂದು ಯಾವುದೇ ಪ್ರಶಸ್ತಿ ಉಲ್ಲೇಖಿಸದೇ  ತಮ್ಮ ಻ಸಮಾಧಾನ ಹೊರ ಹಾಕಿದ್ದಾರೆ.

ಕಳ್ಳರ ಸಂತೆ ಮತ್ತು ಉಗ್ರಂ ಸಿನಿಮಾಗಳಿಗಾಗಿ ನನ್ನ ಹೆಸರು ನಾಮನಿರ್ದೇಶನವಾದಗಲೇ ಪ್ರಶಸ್ತಿ ಆಯ್ಕೆ ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿಯಿತು. ಎಲ್ಲದ್ದಕ್ಕೂ ಒಂದು ಬೆಲೆ ಇದೆ. ನಾಮನಿರ್ದೆಶನಕ್ಕೂ ಮುನ್ನ ನನ್ನ ನಾಮನಿರ್ದೆಶನ ಮತ್ತು ಪ್ರಶಸ್ತಿ ಪಡೆಯುವುದಕ್ಕೂ ಹೇಗೆ ಆಫರ್ ಬಂದಿತ್ತು ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ನಾನು ತುಂಬಾ ಬೇಸರವಾಗಿದೆ. ಪ್ರೋತ್ಸಾಹ ನೀಡಬೇಕಾದ ವೇದಿಕೆಗಳು ಪ್ರೋತ್ಸಾಹ ಕುಂದಿಸಬಾರದು. ಎಲ್ಲ ಪ್ರಶಸ್ತಿ ನೈಜವಾದುದಲ್ಲ ಅಥವಾ ಎಲ್ಲ ಪ್ರಶಸ್ತಿಗಳೂ ನಕಲಿಯಲ್ಲ. ಪ್ರೇಕ್ಷಕರಿಗೆ ಎಲ್ಲರಿಗಿಂತ ಚೆನ್ನಾಗಿ ಸತ್ಯ ಗೊತ್ತು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ