ಲಂಡನ್ ನಿಂದ ವಾಪಸಾಗಿ ಕ್ವಾರಂಟೈನ್ ಮಾಡದೇ ಇರುವ ಬಗ್ಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ

ಬುಧವಾರ, 23 ಡಿಸೆಂಬರ್ 2020 (09:30 IST)
ಬೆಂಗಳೂರು: ದೂರದ ಬ್ರಿಟನ್ ದೇಶದಲ್ಲಿ ರೂಪಾಂತರಿ ಕೊರೋನಾ ಹಾವಳಿ ಜೋರಾಗಿದ್ದು, ಭಾರತದಲ್ಲೂ ಅದರ ಭೀತಿ ಆವರಿಸಿದೆ. ಈ ನಡುವೆ ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗಷ್ಟೇ ಲಂಡನ್ ನಿಂದ ಮರಳಿ, ಕ್ವಾರಂಟೈನ್ ಒಳಗಾಗಿಲ್ಲ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.


ಹರ್ಷಿಕಾ ತಮ್ಮ ಕುರಿತ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ನಾನು ಲಂಡನ್ ನಿಂದ ಭಾರತಕ್ಕೆ ಮರಳಿ ಎರಡು ವಾರಗಳ ಮೇಲಾಗಿದೆ. ಇದಾದ ಬಳಿಕ ಫೋಟೋ ಶೂಟ್ ಗಳಲ್ಲೂ ಭಾಗವಹಿಸಿದ್ದೇನೆ. ನಾನು ನಿನ್ನೆ-ಮೊನ್ನೆ ಮರಳಿದ್ದಲ್ಲ. ಹೀಗಾಗಿ ಕ್ವಾರಂಟೈನ್ ನಲ್ಲಿಲ್ಲ. ನಾನು ಆಗಾಗ ಲಂಡನ್ ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುವ ಕಾರಣ ನಾನು ಈಗಲೂ ಅಲ್ಲೇ ಇದ್ದೇನೆ ಎಂದು ಕೆಲವರು ತಪ್ಪಾಗಿ ತಿಳಿದಿದ್ದಾರೆ. ಆದರೆ ನಾನು ಕ್ವಾರಂಟೈನ್ ಮಾಡದೇ ಇರುವುದಕ್ಕೆ ಯಾರೂ ತಪ್ಪು ತಿಳಿಯುವುದು ಬೇಡ. ನಾನು ಲಂಡನ್ ನಿಂದ ಮರಳಿ ತುಂಬಾ ದಿನಗಳಾಗಿವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ