ನಟಿ ಹರ್ಷಿಕಾ ಪೂಣಚ್ಚ ತಂಗಿ ಪಾತ್ರಗಳಲ್ಲಿ ಯಶಸ್ವಿಯಾದಷ್ಟು ಹೀರೋಯಿನ್ ಪಾತ್ರಗಳಲ್ಲಿ ಆಗಲಿಲ್ಲ. ಆದರೂ ಅವರ ಪ್ರಯತ್ನ ಮಾತ್ರ ಮುಂದುವರೆದಿದೆ. ಸ್ಯಾಂಡಲ್ವುಡ್ನಲ್ಲಿ ಅವಕಾಶಗಳು ಸಿಗದಿದ್ದಾಗ ಬಾಲಿವುಡ್ ಕಡೆಗೆ ಮುಖ ಮಾಡಿದ್ದೂ ಉಂಟು.
ಅಲ್ಲೂ ಹರ್ಷಿಕಾಗೆ ಸಿಕ್ಕಿದ್ದು ಭರವಸೆ ಅಷ್ಟೇ. ಇದೀಗ ಮತ್ತೆ ಸ್ಯಾಂಡಲ್ವುಡ್ನತ್ತ ಮುಖ ಮಾಡಿದ್ದಾರೆ. ಅದರ ಭಾಗವಾಗಿ ಅವರ ಹೊಸ ಚಿತ್ರ ಆರಂಭವಾಗುತ್ತಿದೆ. ಚಿತ್ರದ ಹೆಸರು ಅದಿತಿ. ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ ಹರ್ಷಿಕಾ.
ಬಾಬು ಅಬ್ಬಣ್ಣ ಎಂಬ ಹೊಸಬರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಈ ಪಾತ್ರಕ್ಕಾಗಿ ತೆಳ್ಳಗಾಗಬೇಕಿತ್ತಂತೆ. ಹಾಗಾಗಿ ಹರ್ಷಿಕಾ ಒಂದಷ್ಟು ಕೆ.ಜಿ ತೂಕವನ್ನೂ ಇಳಿಸಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಸೆಟ್ಟೆರುವ ಸಾಧ್ಯತೆಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.