ಬಂಗಾರ ಸನ್ ಆಫ್ ಬಂಗಾರದ ಮನುಷ್ಯನನ್ನು ನೋಡಲಿರುವ ಎಚ್.ಡಿ. ದೇವೇಗೌಡ

ಸೋಮವಾರ, 22 ಮೇ 2017 (14:39 IST)
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ಆಗಾಗ ಸಿನಿಮಾ ನೋಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಅವರ ಸಾಲಿಗೆ ಈಗ ಜೆಡಿಎಸ್ ವರಿಷ್ಠ ದೇವೇಗೌಡ ಸೇರಿದ್ದಾರೆ.

 
ಇಂದು ಅವರು ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸನ್ ಆಫ್ ಬಂಗಾರದ  ಮನುಷ್ಯ ಸಿನಿಮಾ ವೀಕ್ಷಿಸಲಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜತೆಗೆ ವಿದ್ಯಾ ಪ್ರದೀಪ್ ಮುಖ್ಯ ಭುಮಿಕೆಯಲ್ಲಿ ಅಭಿನಯಿಸಿದ್ದಾರೆ.

ಮೈಸೂರಿನ ಚಿತ್ರಮಂದಿರದಲ್ಲಿ ದೇವೇಗೌಡರು ಇಂದು ಸಿನಿಮಾ ವೀಕ್ಷಿಸಲಿದ್ದಾರೆ. ಅವರು ಕೊನೆಯ ಬಾರಿಗೆ ಸಿನಿಮಾ ನೋಡಿದ್ದು ತಮ್ಮ ಮೊಮ್ಮಗ ನಿಖಿಲ್ ಅಭಿನಯಿಸಿದ್ದ ಜಾಗ್ವಾರ್. ಅದರ ನಂತರ ದೇವೇಗೌಡರು ನೋಡುವ ಎರಡನೇ ಚಿತ್ರವಿದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ