ಹೃತಿಕ್ ರೋಶನ್‌ಗೆ ಸ್ಫೂರ್ತಿ ನೀಡಿದ ಹೀರೋ ಇವರಂತೆ!

ಬುಧವಾರ, 8 ಜುಲೈ 2015 (10:27 IST)
ಬಾಲಿವುಡ್ ನಟ ಹೃತಿಕ್ ರೋಶನ್ ಅವರು ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್   ಅವರ ಹುಟ್ಟು ಹಬ್ಬದ ಶುಭಾಶಯವನ್ನು ತಮ್ಮ ಟ್ವಿಟ್ಟರ್  ಖಾತೆಯಿಂದ ತಿಳಿಸಿದ್ದಾರೆ. ಹೃತಿಕ್ ಬದುಕಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಎನ್ನುವ ಅಗ್ಗಳಿಕೆಯನ್ನು ಈ ಬಾಲಿವುಡ್ ನಟ ತಮ್ಮ ಅಭಿಮಾನಿಗಳ ಮುಂದೆ ಹೇಳಿದ್ದಾರೆ. 
ನನ್ನಂತಹ ಸಪೂರ  ಹಾಗೂ ಶಕ್ತಿಹೀನ ದೇಹಾಕೃತಿಯ ವ್ಯಕ್ತಿಗಳಿಗೆ  ಸ್ಟಲ್ಲೋನ್ ಅವರು ಆದರ್ಶ. ನಿಮಗೆ ಹ್ಯಾಪಿ ಬರ್ತ ಡೇ!  ತಮ್ಮ ಕೈಲಿ ಸಾಧ್ಯವಿಲ್ಲ ಎಂದು ಕೈ ಚಲ್ಲಿ ಕೂತವರಿಗೆ ಅವರೇ ಸ್ಫೂರ್ತಿ ಎಂದು ಹಾಡಿ ಹೊಗಳಿದ್ದಾರೆ ಹೃತಿಕ್.  ಸ್ಟಲ್ಲೋನ್  ಅವರ ಹುಟ್ಟು ಹಬ್ಬ ಜುಲೈ 6. ಅಂದು ಅವರ ಅಭಿಮಾನಿಗಳಿಂದ ಭರಪೂರ ವಿಷಸ್ ದೊರೆತಿತ್ತು. 
 
ಸಲ್ಮಾನ್ ಖಾನ್ ಸಹ ಈ  ಹಾಲಿವುಡ್ ನಟ ಅಭಿಮಾನಿ. ಸಲ್ಲು ಮಿಯ ಅ ನಟನನ್ನು ಟ್ವಿಟ್ಟರ್ ಮೂಲಕ ‍ಫಾಲೋ ಮಾಡುತ್ತಿದ್ದಾರೆ. ಪ್ರಸ್ತುತ ಹೃತಿಕ್ ರೋಶನ್ ಅವರು ಅಶುತೋಷ್ ಗೊವಾರಿಕರ್ ಅವರ ನಿರ್ದೇಶನದ ಬಹು ನಿರೀಕ್ಷಿತ, ಕುತೂಹಲಕರ ಚಿತ್ರ ಮೊಹೆಂಜೊದಾರೋದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ನಟ ಅತಿ ಸಾಹಸ ಮಾಡಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಈ ಚಿತ್ರದಲ್ಲಿ ಪೂಜಾ ಹೆಗಡೆ ಹೃತಿಕ್ ಹೀರೋಯಿನ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ