ಗುರುವಾರದಿಂದ (ಫೆ.23) ’ಹೆಬ್ಬುಲಿ’ ಬೇಟೆ ಆರಂಭ

ಬುಧವಾರ, 22 ಫೆಬ್ರವರಿ 2017 (17:26 IST)
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಬೇಟೆ ಗುರುವಾರದಿಂದ ಆರಂಭವಾಗುತ್ತಿದೆ. ಬೆಂಗಳೂರಿನ ಸಂತೋಷ್ ಮುಖ್ಯ ಚಿತ್ರಮಂದಿರ ಸೇರಿದಂತ ರಾಜ್ಯದಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳು ಹೆಬ್ಬುಲಿ ಆಟಕ್ಕೆ ಸಜ್ಜಾಗಿವೆ. 
 
ಮಹಾಶಿವರಾತ್ರಿ, ವಾರಾಂತ್ಯ ರಜಾ ದಿನಗಳು ’ಹೆಬ್ಬುಲಿ’ ಬಾಕ್ಸ್ ಆಫೀಸಲ್ಲಿ ಗರ್ಜಿಸಲು ಸಾಧ್ಯವಾಗಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಪಾತ್ರವರ್ಗದಲ್ಲಿರುವುದು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಅಮಲಾ ಪೌಲ್ ಚಿತ್ರದ ನಾಯಕಿ.
 
ಕೃಷ್ಣ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಸುದೀಪ್ ಗೆಟಪ್, ಈಗಾಗಲೆ ಬಿಡುಗಡೆಯಾಗಿರುವ ಪೋಸ್ಟರ್‌ಗಳು, ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿವೆ. ಅರ್ಜುನ್ ಜನ್ಯ ಸಂಗೀತ ಇರುವ ಚಿತ್ರದಲ್ಲಿ ಪಿ ರವಿಶಂಕರ್ ಖಳನಟನಾಗಿ ಕಾಣಿಸಲಿದ್ದಾರೆ. ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ ಹಾಗೂ ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ