ಹ್ಯಾಪಿ ಬರ್ತ್‌ಡೆಗೆ ನಾಯಕಿ ಫಿಕ್ಸ್

ಶುಕ್ರವಾರ, 4 ಸೆಪ್ಟಂಬರ್ 2015 (09:28 IST)
ರಾಜಕಾರಣಿಗಳ ಮಕ್ಕಳು ಸಿನಿಮಾ ಮಡ್ತಿರೋದು ನಿಮಗೆ ಗೊತ್ತೆ ಇದೆ. ಹೆಸರಾಂತ ಪೊಲಿಟಿಷಿಯನ್ಸ್ ಗಳ ಮಕ್ಕಳು ಗಾಂಧಿನಗರಕ್ಕೆ ಬಂದು ಹವಾ ಮಾಡಲು ಹೊರಟಿದ್ದಾರೆ. ಅದ್ರಲ್ಲಿ ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರ ಮಗ ಸಚಿನ್ ಕೂಡಾ ಒಬ್ಬರು. ಇದೇ ಮೊದಲ ಬಾರಿಗೆ ಸಚಿನ್ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಅವರ ಡೆಬ್ಯೂ ಚಿತ್ರ ಹ್ಯಾಪಿ ಬರ್ತ್ ಡೆ. 
ಸಾಕಷ್ಟು ದಿನಗಳಿಂದ ಸಚಿನ್ ಗೆ ನಾಯಕಿಯ ಹುಡುಕಾಟ ನಡೆಯುತ್ತಿತ್ತು. ಕೊನೆಗೂ ಹ್ಯಾಪಿ ಬರ್ತ್ ಡೆಗೆ ನಾಯಕಿ ಆಗಮಿಸಿದ್ದಾಳೆ. ಈ ಮೋಹಕ ಬೆಡಗಿಯ ಹೆಸರು ಸಂಸ್ಕೃತಿ ಶೆಣೈ. ಸಂಸ್ಕೃತಿ ಹುಟ್ಟಿ ಬೆಳೆದೆದ್ದು ನೆರೆ ರಾಜ್ಯ ಕೇರಳದಲ್ಲಿ. ಆದ್ರೆ ಶೆಣೈ ಸಿನಿಮಾ ಹೊಸತೇನಲ್ಲ. ಈ ತೆರೆಕಂಡ ಮೈ ಫ್ರೆಂಡ್ ರಾಮು ಎಂಬ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ರು.
 
ಅಷ್ಟೇ ಅಲ್ಲದೆ ಬ್ಲಾಕ್ ಬಟರ್ ಪ್ಲೈ, ವೇಗಂ, ಜೊತೆಗೆ ತಮಿಳಿನ ಕಾಡು ಹಾಗೂ ತೆಲುಗು ಚಿತ್ರದಲ್ಲೂ ಕಾಣಿಸಿಕೊಂಡಿದ್ರು. ಇನ್ನ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಕ್ಯೂನಲ್ಲಿವೆ. ಜೊತೆಗೆ ಹ್ಯಾಪಿಬರ್ಥ್ ಡೇ ಚಿತ್ರ ತನ್ನ ಫಸ್ಟ್ ಶೆಡ್ಯೂಲ್  ಶೆಡ್ಯೂಲ್ ಅನ್ನ ಮುಗಿಸಿದೆ. ಮಹೇಶ್ ಸುಖಧರೆ ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ