ದಕ್ಷಿಣ ಭಾರತದಲ್ಲಿ ಹೀರೋಗಳದ್ದೇ ಕಾರುಬಾರು - ಸಮಂತ

ಶುಕ್ರವಾರ, 8 ಆಗಸ್ಟ್ 2014 (12:12 IST)
ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಪಟ್ಟ ಪಡೆದ ನಟಿ ಸಮಂತ . ಆಕೆಯು ತನ್ನ ರೂಪ ಅಭಿನಯದ ಮೂಲಕ ನಂಬರ್ ಒನ್ ಸ್ಥಾನದ ಅತಿ ಸಮೀಪ ಇರುವ ಕಲಾವಿದೆ. ಆಕೆ ಪ್ರಕಾರ  ದಕ್ಷಿಣ ಭಾರತದಲ್ಲಿ ಹೀರೋ ಡಾಮಿನೇಷನ್ ಹೆಚ್ಚಾಗಿರುತ್ತದೆ. ಅಂದರೆ ಇಲ್ಲಿ ಹೀರೋಗಳದ್ದೇ ಮೇಲುಗೈ ಹೀರೋಯಿನ್ ಗಳಿಗಿಂತ. 

ಆದರೆ ಉತ್ತರ ಭಾರತದಲ್ಲಿ ಹೀರೋಗಳ ಜೊತೆಗೆ ಹೀರೋಯಿನ್ ಗಳಿಗೂ ಸಹಿತ ಆದ್ಯತೆ ಇದೆ. ಕಮರ್ಷಿಯಲ್ ಪಾಯಿಂಟ್ ಆಫ್ ವ್ಯೂ ನಿಂದ ಇಂತಹ ಒಂದು ವಾತಾವರಣ ಅಲ್ಲಿ  ಕಲ್ಪಿತ ಆಗಿದೆ ಎನ್ನುವ ಮಾತನ್ನು ಹೇಳಿದ್ದಾಳೆ ಸಮಂತ. ಎ ಮಾಯಾ ಚೆಶಾವೆ ಎನ್ನುವ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಆದ ಈ ಚೆಲುವೆ ಆನಂತರ ತಮಿಳು ಭಾಷೆಯಲ್ಲೂ ಸಹಿತ ನಟಿಸಿದರೂ ಅಲ್ಲಿ ಹೆಚ್ಚು ಗೆಲುವು ಸಾಧಿಸಲು ಸಾಧ್ಯ ಆಗದೆ ಇರುವುದರಿಂದ ಬೇಜಾರಾಗಿದೆ  ಎನ್ನುವ ಸಂಗತಿ ಹೇಳಿದ್ದಾಳೆ.

ಅಮ್ಮ ಮಲೆಯಾಳದ ಹೆಣ್ಣು ಮಗಳು, ಅಪ್ಪ ತೆಲುಗು ಈ ಇಬ್ಬರ ಮುದ್ದಿನ ಮಗಳು ಸಮಂತ ತಮಿಳು ಭಾಷೆಯ ಹುಡುಗಿ. ಏಕೆಂದರೆ ಆಕೆ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ ಆದ ಕಾರಣ ಅದೇ ಆಕೆಯ ಮಾತೃಭಾಷೆ.. ಅಭಿಮಾನ ಅಂದ್ರೆ ಹೀಗೆ ಇರಬೇಕು   ನೆಲದ ಬಗ್ಗೆ!  
ಆಕೆಯ ಬಗ್ಗೆ ತೆಲುಗು ಪೀಪಲ್ ಗೆ ಸಿಕ್ಕಾಪಟ್ಟೆ ಇಷ್ಟ ಇದೆ.
 
 ಆದ ಕಾರಣ ಯಶಸ್ಸು ಸದಾ ಆಕೆಯ ಕೈ ಹಿಡಿದಿದೆ.ಕೇವಲ ಮರ ಸುತ್ತುವ ಪಾತ್ರವಲ್ಲದೆ ಆಗಾಗ ಆಕೆ ಪೂರ್ಣ ಪ್ರಮಾಣದ ನಾಯಕಿ ಆಗಿಯೂ ಸಹಿತ ತೆರೆ ಮೇಲೆ ಬಂದಿದ್ದಾಳೆ. ಅದನ್ನು ಸಹಿತ ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಕಮರ್ಷಿಯಲ್ ಚಿತ್ರದಲ್ಲಿ ನಟಿಸಿದ್ದೇನೆ. ಅದರಲ್ಲೂ ಈಗ ದಂತಹ ಪ್ರಯೋಗಶೀಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ರಾಷ್ಟ್ರೀಯ ಮಟ್ಟದಲ್ಲೂ   ಸಹಿತ ಎಲ್ಲರ ಗಮನ ಸೆಳೆದಿದ್ದೇನೆ ಎನ್ನುವ ಈ ಚೆಲುವೆ ಟಾಲಿವುಡ್ ಮನ್ಮಥ ನಾಗಾರ್ಜುನ ಅವರ ಮನಂ ಚಿತ್ರದಲ್ಲೂ ಸಹಿತ ಅತ್ಯುತ್ತಮ ಅಭಿನಯ ನೀಡಿ ಎಲ್ಲರ ಗಮನ ಸೆಳೆದಿದ್ದಳು.

ವೆಬ್ದುನಿಯಾವನ್ನು ಓದಿ