ಕಾಂತಾರ ಬಳಿಕ ಸಲಾರ್ ನಲ್ಲೂ ಅದ್ಭುತ ಕ್ಲೈಮ್ಯಾಕ್ಸ್ ದೃಶ್ಯ: ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್

ಭಾನುವಾರ, 16 ಅಕ್ಟೋಬರ್ 2022 (08:30 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ಶ್ರೀಮಂತ ಮೇಕಿಂಗ್ ಗೆ ಹೆಸರು ವಾಸಿ. ಕೆಜಿಎಫ್ ಇರಲಿ, ಕಾಂತಾರವಿರಲಿ, ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಸಲಾರ್ ಸಿನಿಮಾವನ್ನೂ ಅಷ್ಟೇ ಅದ್ಭುತವಾಗಿ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ  ಪ್ರಭಾಸ್ ನಾಯಕರಾಗಿರುವ ಸಲಾರ್ ಚಿತ್ರೀಕರಣ ಹಂತದಲ್ಲಿದೆ.

ಸಲಾರ್ ನಲ್ಲೂ ಅದ್ಭುತ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸುತ್ತಿರುವುದಾಗಿ ಹೊಂಬಾಳೆ ಫಿಲಂಸ್ ಸುಳಿವು ಕೊಟ್ಟಿದೆ. ಕೆಜಿಎಫ್ ಗಿಂತಲೂ ಅದ್ಭುತ ಸಾಹಸ ದೃಶ್ಯಗಳನ್ನು ಈ ಸಿನಿಮಾದಲ್ಲಿ ಸೇರ್ಪಡೆ ಮಾಡುವುದಾಗಿ ಈಗಾಗಲೇ ಹೊಂಬಾಳೆ ಫಿಲಂಸ್ ಹೇಳಿತ್ತು. ಈಗ ಕ್ಲೈಮ್ಯಾಕ್ಸ್ ಬಗ್ಗೆ ಸುಳಿವು ಕೊಟ್ಟ ವೀಕ್ಷಕರ ಕಾತುರ ಮತ್ತಷ್ಟು ಹೆಚ್ಚಿಸಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ