ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ?

ಮಂಗಳವಾರ, 25 ಜುಲೈ 2023 (16:27 IST)
ಬೆಂಗಳೂರು: ನೀರಸವಾಗಿದ್ದ ಚಿತ್ರಮಂದಿರಗಳು ಎದ್ದು ನಿಲ್ಲುವಂತೆ ಮಾಡಿದ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದುವರೆಗೆ ಮಾಡಿರುವ ಬಾಕ್ಸ್‍ ಆಫೀಸ್ ಗಳಿಕೆ ಎಷ್ಟು ನೋಡೋಣ.

ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಮೊದಲ ದಿನವೇ 1 ಕೋಟಿ ರೂ. ಸನಿಹ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಬಜೆಟ್ ಸುಮಾರು 6 ಕೋಟಿ ಎನ್ನಲಾಗಿದೆ.

ಇದೀಗ ಐದು ದಿನಗಳ ಕಲೆಕ್ಷನ್ 5 ಕೋಟಿ ರೂ. ದಾಟಿದೆ. ಹೀಗಾಗಿ ಹಾಸ್ಟೆಲ್ ಹುಡುಗರು ನಿರ್ಮಾಪಕರ ಜೇಬಿಗೂ ಮೋಸ ಮಾಡಿಲ್ಲ ಎನ್ನಬಹುದು. ಜೊತೆಗೆ ಕತೆ, ನಿರೂಪಣೆ ಚೆನ್ನಾಗಿದ್ದರೆ ಹೊಸಬರ ಸಿನಿಮಾವನ್ನೂ ಜನ ನೋಡುತ್ತಾರೆ ಎಂಬ ಭರವಸೆ ಹುಟ್ಟಿಸುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ