ಫ್ಲೈ ಯಿಂದ ಹಾರಿ ಹೋದ ಹರಿಪ್ರಿಯ .. ಮಿಲನಾ ಮಿಲನಾ ಎಂದು ಹಾಡಿದ ರಾಜವರ್ಧನ್

ಗುರುವಾರ, 2 ಅಕ್ಟೋಬರ್ 2014 (11:44 IST)
ಸ್ವಲ್ಪ  ಕಾಲ ಯಾವುದೇ ರೀತಿಯ ಯಶಸ್ಸು ಪಡೆಯದೇ ಇದ್ದ ಹರಿಪ್ರಿಯ ಅದೃಷ್ಟ ಕಾಲ ಈಗ ಎಂದೇ ಹೇಳ ಬಹುದಾಗಿದೆ. ಆಕೆಯ ನಟನೆಯ ಉಗ್ರಂ ಚಿತ್ರ ಗೆದ್ದ ಬಳಿಕ ಈಗ ಕೈ ತುಂಬಾ ಅವಕಾಶ. ಆ ಕಾರಣದಿಂದ ಸಿಕ್ಕ ಕೆಲವು ಚಿತ್ರಗಳಿಂದ ಹೊರ ಬರುವ ಪರಿಸ್ಥಿತಿ ಉಂಟಾಗಿದೆ. ಫ್ಲೈ  ಎನ್ನುವ ಚಿತ್ರ ಭಿನ್ನರೀತಿಯಲ್ಲಿ ಲಾಂಚ್ ಆಗಿತ್ತು. 
 
ರಾಜವರ್ಧನ್ ನಾಯಕರಾಗಿರುವ ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಮುಹೂರ್ತಕ್ಕೆ ಭಾಗವಹಿಸಿದ ಈ ಬಾಲೆ ಶೂಟಿಂಗ್ ಗೆ ಬರಲು ಸಾಧ್ಯ ಆಗಿಲ್ಲ. ಆಕೆಯ ಬದಲಾಗಿ ಹೊಸ ಹುಡುಗಿ ಎಂಟ್ರಿ ಆಗಿದ್ದಾಳೆ ಅವಳೇ ಬೃಂದಾವನ ಚಿತ್ರದಲ್ಲಿ ದರ್ಶನ್ ಜೋಡಿ ಇಬ್ಬರು ನಾಯಕಿಯರಲ್ಲಿ ಒಬ್ಬಾಕಿ ಆಗಿದ್ದ  ಮಿಲನಾ ಈಗ ಈಕೆ ಫ್ಲೈ ಚಿತ್ರಕ್ಕೆ ಆಯ್ಕೆ ಆಗಿದ್ದಾಳೆ. 
 
ಲೆಕ್ಕ ಇಲ್ಲದಷ್ಟು  ಪ್ರಾಜೆಕ್ಟ್ ಹೊಂದಿರುವ  ಹರಿಪ್ರಿಯಾ ಡೇಟ್ಸ್  'ಫ್ಲೈ' ಚಿತ್ರತಂಡದ ಸಮಯಕ್ಕೆ ಅಡ್ಡಗಾಲು ಆದ ಕಾರಣ ಆಕೆ ಬದಲಾಗಿ ಬೇರಾಕೆ ಬಂದಿದ್ದಾಳೆ. ಪ್ರಸ್ತುತ  ಹರಿಪ್ರಿಯಾ ಸುದೀಪ್ ನಾಯಕರಾಗಿರುವ ರನ್ನ, ರಿಷಭ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ ನಾಯಕರಾಗಿರುವ ರಿಕ್ಕಿ ಚಿತ್ರಗಳ  ಚಿತ್ರೀಕರಣದಲ್ಲಿ ಮಗ್ನ ರಿಕ್ಕಿ ಈಗ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. 
 
ಬೃಂದಾವನದ ಬಳಿಕ  ಮಿಲನಾ ನಮ್ ದುನಿಯಾ ನಮ್ ಸ್ಟೈಲ್ ,ಕೃಷ್ಣ ನಾಯಕರಾಗಿರುವ  ಚಾರ್ಲಿ ಸಿನಿಮಾದಲ್ಲಿ ನಟಿಸಲು ಆದ್ಯತೆ ನೀಡಿದ್ದರು.  ಅಂತೂ ಸಾಕಷ್ಟು ಚೂಸಿ ಆಗಿರುವ ಮಿಲನಾಗೆ ಫ್ಲೈ ಚಿತ್ರದ ಕಥೆ ಲೈಕ್ ಆಗಿದೆಯಂತೆ ಅದಕ್ಕೆ ಆಕೆ ಕಡೆಯಿಂದ  ಓಕೆ ಆಗಿದೆ. ಈ ತಿಂಗಳು 14ರಿಂದ ಚಿತ್ರೀಕರಣ ಆರಂಭ. 
 

ವೆಬ್ದುನಿಯಾವನ್ನು ಓದಿ