ಈ ಚಿತ್ರವನ್ನು ಕೊರಿಯಾಗ್ರಾಫರ್ -ನಟ- ನಿರ್ದೇಶಕ ಪ್ರಭುದೇವ ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆಂದು ಅವರು ಸುಮಾರು ಹದಿನೇಳು ಕೆಜಿಗಳಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅದಕ್ಕೆಂದು ಜಿಮ್ ನಲ್ಲಿ ಬೆವರು ಸುರಿಸಿ ಸಣ್ಣಗಾಗಿದ್ದಾರೆ. ಇದರಲ್ಲಿ ಕತ್ತಿವರಸೆಯ ಫೈಟ್ಸ್ ಇದ್ದು, ಅದಕ್ಕೆಂದು ಅಜಯ್ ಈ ರೀತಿಯ ಬದಲಾವಣೆಯತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಕಟ್ಟುನಿಟ್ಟಿನ ಆಹಾರವನ್ನು ಸಹಿತ ಸೇವಿಸಿ ಆ ಮುಖಾಂತರವೂ ತಮ್ಮ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದಾರೆ. ಮೊಟ್ಟೆಯ ಬಿಳಿಭಾಗ, ಬೇಯಿಸಿದ ತರಕಾರಿ ಮತ್ತು ಕೋಳಿಮಾಂಸ ಆಹಾರದ ಮುಖ್ಯ ಭಾವನ್ನಾಗಿ ಮಾಡಿಕೊಂಡಿದ್ದಾರೆ. ಈ ರೀತಿ ತಮ್ಮನ್ನು ಸಂಪೂರ್ಣವಾಗಿ ಮಾರ್ಪಾಟು ಮಾಡಿಕೊಂಡಿರುವ ಹೀರೋ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಅವರ ಅಭಿಮಾನಿಗಳು. ಅಜಯ್ ಅವರ ಹೊಸರೂಪದ ಟ್ರೇಲರ್ ನೋಡಲು ಸಾಕಷ್ಟು ಆಸಕ್ತಿಯಿಂದ ಕಾಯುತ್ತಿದ್ದಾರೆ ಅವ್ರ ಅಭಿಮಾನಿಗಳು.