ಬೆಂಗಳೂರು:ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ಶೀರ್ಷಿಕೆ ’ಹೊಯಸಳ’ ಎಂದಿಡಲು ತೀರ್ಮಾನಿಸಲಾಗಿತ್ತು. ಆದರೆ ನಿರ್ಮಾಪಕ ರಾಮು ಅವರು ಈ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ನಡಿ ನೋಂದಾಯಿಸಿಕೊಂಡಿದ್ದು, ಅದನ್ನು ಶಿವರಾಜ್ ಕುಮಾರ್ ಅವರಿಗಾಗಿಯೇ ಮೀಸಲಾಗಿದೆ ಎಂದು ಹೇಳಿದ್ದಾರೆ.
ನಿಖಿಲ್ ಸಿನೆಮಾ ನಿರ್ಮಿಸುತ್ತಿರುವ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ ಈ ಬಗ್ಗೆ ಸ್ಪಷ್ಟಪಡಿಸಿರುವುದಾಗಿ ರಾಮು ತಿಳಿಸಿದ್ದಾರೆ. ’ಹೊಯ್ಸಳ' ಶೀರ್ಷಿಕೆ ಶಿವರಾಜ್ ಕುಮಾರ್ ಅವರಿಗೆ ಮೀಸಲಾಗಿದ್ದು, ಬಹಳ ಸಮಯದಿಂದ ಕಾಯ್ದಿರಿಸಿಕೊಂಡಿದ್ದೇನೆ. ಈಗ ಕಥೆ ಸಿದ್ಧವಾಗುತ್ತಿದ್ದು, ಅದು ಶೀರ್ಷಿಕೆಗೆ ಒಪ್ಪುತ್ತದೆ" ಹಾಗಾಗಿ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆಮತ್ತೊಂದು ಶೀರ್ಷಿಕೆ ಹುಡುಕಿಕೊಳ್ಳುವಂತೆ ರಾಮು ತಿಳಿಸಿದ್ದಾರೆ.