'ಮೊಹೆಂಜೊದಾರೋ' ಚಿತ್ರದ ಚಿತ್ರೀಕರಣ ವೇಳೆ ಹೃತಿಕ್‌ಗೆ ಗಾಯ

ಸೋಮವಾರ, 29 ಜೂನ್ 2015 (10:22 IST)
ಬಾಲಿವುಡ್ ನ ಅತ್ಯದ್ಭುತವಾದ, ವಿಶಿಷ್ಟವಾದ, ವಿಭಿನ್ನವಾದ ನಿರ್ದೇಶಕ ಅಶುತೋಷ್ ಗೋವಾರಿಕರ್.ಅವರು ಇತ್ತೀಚೆಗೆ ಸಂಗೀತ  ನಿರ್ದೇಶಕ ಆರ್ ಡಿ ಬರ್ಮನ್ ಅಲಿಯಾಸ್ ಪಂಚಮ್ ದಾ ಅವರ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಿದರು. ಆ ಅಶುತೋಷ್ ಅವರು ಮಾತನಾಡುತ್ತಾ, ಹೃತಿಕ್ ರೋಶನ್ ಅವರು ಅಧಿಕ ಪ್ರಮಾಣದಲ್ಲಿ ತಮ್ಮನ್ನು ತಾವು ಚಿತ್ರದಲ್ಲಿ ತೊಡಗಿಸಿಕೊಂಡು ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಮೊಹೆಂಜೊದಾರೋ ಚಿತ್ರದಲ್ಲಿ ಮಿತಿ ಮೀರಿ ಸಾಹಸ ದೃಶ್ಯದಲ್ಲಿ ನಟಿಸಿದ ಕಾರಣ ಅವರ ಭುಜಕ್ಕೆ ಗಾಯವಾಗಿದೆ. 
ದೃಶ್ಯ ಅದ್ಭುತ ರೀತಿಯಲ್ಲಿ ಹೊರ ಹೊಮ್ಮಲೆಂದು ಮಾಡಿದ ಸಾಹಸದಿಂದ ಹೃತಿಕ್ ಭುಜಕ್ಕೆ ಗಾಯವಾಗಿದೆ ಎಂದು ಹೇಳಿ ಅವರ ಈ ಅರ್ಪಣಾ ಮನೋಭಾವವನ್ನು ಹೊಗಳಿದ್ದಾರೆ ಅಶುತೋಷ್ .ಸಿಂಧು ಕಣಿವೆ ನಾಗರೀಕತೆಯ ಅಂಶಗಳ ಆಧಾರದ ಮೇಲೆ ಪ್ರೇಮ ಹಾಗೂ ಸಾಹಸ ಪ್ರಧಾನ ಅಂಶಗಳನ್ನು ಒಳಗೊಂಡ  ಥ್ರಿಲ್ಲರ್ ಚಿತ್ರ ಮೆಹೆಂಜೋದಾರೋ.ಇದರಲ್ಲಿ ಕಬೀರ್ ಬೇಡಿ ಮತ್ತು ಪೂಜಾ ಹೆಗಡೆ ಸಹ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಆಗಸ್ಟ್ ತಿಂಗಳ 12ರಂದು ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ. 

ವೆಬ್ದುನಿಯಾವನ್ನು ಓದಿ