ಕಬೀರ್ ಖಾನ್ ಮುಂದಿನ ಸಿನಿಮಾದಲ್ಲಿ ಹೃತಿಕ್ ರೋಷನ್ ?

ಸೋಮವಾರ, 23 ನವೆಂಬರ್ 2015 (10:52 IST)
ಭಜರಂಗಿ ಭಾಯಿಜಾನ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಕಬೀರ್ ಖಾನ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಹೀಗಿರುವಾಗಲೇ ಸಿನಿಮಾಕ್ಕಾಗಿ ಹೃತಿಕ್ ಅವರ ಜೊತೆ ಮಾತುಕತೆ ನಡೆಸಲಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
 
ಆದ್ರೆ ಕಬೀರ್ ಖಾನ್ ಮಾತ್ರ ಈ ಮಾತನ್ನು ತಳ್ಳಿ ಹಾಕಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಇದುವೆರೆಗೂ ಸಿನಿಮಾದಲ್ಲಿ ಹೃತಿಕ್ ರೋಷನ್ ಅಭಿನಯಿಸುತ್ತಾರೆ ಅನ್ನೋದು ನಿರ್ಧಾರ ಅಂತಿಮವಾಗಿಲ್ಲ. ಇನ್ನು ಸಾಜಿದ್ ನಾಡಿಯವಾಲಾ ನಿರ್ಮಾಣದ ಸಿನಿಮಾವನ್ನು ಕಬೀರ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿಯೂ ಕೇಳಿ ಬಂದಿತ್ತು. ಅದು ಕೂಡ ಅಂತಿಮವಾಗಿಲ್ಲ ಎಂದು ಕಬೀರ್ ಖಾನ್ ತಿಳಿಸಿದ್ದಾರೆ. ಆ ಮೂಲಕ ಬಹು ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
 
ಇನ್ನು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರ ಹಾಕಿದ ಕಬೀರ್ ಖಾನ್ ಪತ್ರಿಕೆಗಳು ನನ್ನ ಸಿನಿಮಾಗಳ ಬಗ್ಗೆ  ಸರಿಯಾಗಿ ತಿಳಿದುಕೊಳ್ಳಬೇಕು.ನಾನು ಸದ್ಯಮಾಡುತ್ತಿರುವ ಸಿನಿಮಾಗಳ ಬಗ್ಗೆ ಮೊದಲೇ ಹೇಳಿದ್ದೇನೆ. ಒಂದು ವೇಳೆ ಹೃತಿಕ್ ರೋಷನ್ ಹಾಗೂ ಸಾಜಿದ್ ಜೊತೆ ಕೆಲಸ ಮಾಡೋ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ್ರೆ ನಾನೇ ಎಲ್ಲರಿಗೂ ತಿಳಿಸುತ್ತೇನೆ ಅಂತಾ ಕಬೀರ್ ಖಾನ್ ಕಟುವಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ