ಪ್ರೇಮ.. ಪ್ರೇಮ.. ಪ್ರೇಮ..ಹುಚ್ಚಾ ವೆಂಕಟ್ ಹುಚ್ಚಾಟ: ಆತ್ಮಹತ್ಯೆಗೆ ಯತ್ನ

ಭಾನುವಾರ, 18 ಜೂನ್ 2017 (17:15 IST)
ಬೆಂಗಳೂರು: ನಟ ಹುಚ್ಚ ವೆಂಕಟ ಅವರು ಭಗ್ನ ಪ್ರೇಮದಿಂದ ಮನನೊಂದು ಪಿನಾಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
 
ತಮ್ಮ ತೋಟದ ಮನೆಗೆ ತೆರಳಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ವೆಂಕಟ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಧ್ಯಮ ಪ್ರತಿನಿಧಿಗೆ ಎಸ್ಎಂಎಸ್ ಕಳುಹಿಸಿರುವ ವೆಂಕಟ್ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪಿನಾಲ್ ಸೇವಿಸಿದ್ದಾರೆ ಎನ್ನಲಾಗಿದೆ.
 
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರೇಮ, ಪ್ರೇಮ, ಪ್ರೇಮ ಅಂತ ಕಿರುಚಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಬೆಳಗ್ಗೆ 10ಗಂಟೆಗೆ ತಮ್ಮ ತಂದೆ ಜತೆ ತೋಟದ ಮನೆ ಸೇರಿದ್ದ ವೆಂಕಟ್ ತಾನು ಪ್ರೀತಿಸುತ್ತಿದ್ದ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದು ಫಿನಾಯಿಲ್ ಸೇವಿಸಿರುವುದಾಗಿ ತಿಳಿದುಬಂದಿದೆ. 
 

ವೆಬ್ದುನಿಯಾವನ್ನು ಓದಿ