ಥಿಯೇಟರ್‌ಗೆ ಬರಲು ಸಿದ್ಧವಾಗುತ್ತಿರುವ ’ಹುಲಿರಾಯ’

ಸೋಮವಾರ, 20 ಫೆಬ್ರವರಿ 2017 (11:39 IST)
ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಪ್ರಾಣಿ. ಒಂದು ವೇಳೆ ಅದೇ ಹುಲಿ ಬೆಂಗಳೂರಿನಂಥಾ ಸಿಟಿಗೆ ಬರುವಂತಾದರೆ ಏನಾಗ ಬಹುದು, ಎಂತೆಂಥಾ ಅನಾಹುತಗಳಾದೀತೆಂಬ ಎಳೆಯೊಂದಿಗೆ ಬೆಂಗಳೂರಿನಂಥಾ ಮಹಾ ನಗರಿಗಳ ಜಂಜಡ, ಒತ್ತಡಗಳನ್ನ ಬೇರೆಯದ್ದೇ ರೀತಿಯಲ್ಲಿ ಹೇಳುವ ಭಿನ್ನ ಪ್ರಯತ್ನ ಈ ಚಿತ್ರದಲ್ಲಿದೆಯಂತೆ. 
 
ಈಗಾಗಲೇ `ಹುಲಿರಾಯ'ನ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಸಾಕಷ್ಟು ಹೆಸರು ಮಾಡಿದೆ. ಅರವಿಂದ್ ಕೌಶಿಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ, ಸಂಕೇತ್ ವಿರಾಜಪೇಟೆ ಸಂಕಲನ, ಅರವಿಂದ ಕೌಶಿಕ್, ನಂದಿನಿ ನಂಜಪ್ಪ ಸಾಹಿತ್ಯ, ಅಲ್ಟಿಮೇಟ್ ಶಿವು ಸಾಹಸ, ಮಂಜು ಶಿಂಧೆ ಕಲಾ ನಿರ್ದೇಶನವಿದೆ. 
 
ಬಾಲು ನಾಗೇಂದ್ರ, ದಿವ್ಯಾ ಉರುಡುಗ, ಚಿತ್ರಶ್ರೀ ಅಂಚನ್, ನವರಸ ರಾಮಕೃಷ್ಣ, ರಘು ಪಾಂಡೇಶ್ವರ, ರೇಣು, ನಾಗೇಂದ್ರ ಕುಮಾರ್, ಹರೀಶ್ ನೀನಾಸಂ, ಕುಲ್ದೀಪ್, ಶ್ರೀನಾಥ ಕೌಂಡಿನ್ಯ, ರಕ್ಷಿತ್ ಶೆಟ್ಟಿ, ಪ್ರದೀಪ್ ಮುಂತಾದವರ ತಾರಾಗಣ `ಹುಲಿರಾಯ' ಚಿತ್ರಕ್ಕಿದೆ.
 
ಎಸ್.ಎಲ್.ಎನ್ ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಿಸುತ್ತಿರುವ `ಹುಲಿರಾಯ' ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ನೆರವೇರಿ ಮುಕ್ತಾಯಗೊಂಡಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ