ಹಲೋ ಸಂಕೋಚ ಯಾಕೆ, ನನಗೆ 34 ವರ್ಷ: ಕರಿನಾ ಕಪೂರ್

ಬುಧವಾರ, 4 ಮಾರ್ಚ್ 2015 (09:59 IST)
ನಮಗೆ ಆದ ವಯಸ್ಸನ್ನು ಬಚ್ಚಿಡಲು ಯಾಕೆ ಒದ್ದಾಡ ಬೇಕು ಎನ್ನುವ ಮಾತನ್ನು ಬಾಲಿವುಡ್ ಜೋರೋ ಸೈಜ್ ನಟಿ ಕರೀನಾ ಕಪೂರ್ ಹೇಳಿದ್ದಾರೆ. ಈಗ ಆ ತಾರೆಯ ವಯಸ್ಸು 34 ವರ್ಷಗಳು. ಆ ಸಂಗತಿಯನ್ನು ಖುದ್ದು ಆಕೆ ಮಾಧ್ಯಮಗಳ ಮುಂದೆ ಹೇಳಿದ್ದಾಳೆ. ಗಂಡಸರ ಸಂಬಳ ಹೆಣ್ಣುಮಕ್ಕಳ ವಯಸ್ಸು ಕೇಳಬಾರದು ಎನ್ನುತ್ತಾರೆ ಅಲ್ಲವೇ ಎಂದು ಮಾಧ್ಯಮ ಪ್ರಶ್ನಿಸಿದಾಗ ಆಕೆ ನನಗೆ ಅಂತಹ ಯಾವುದೇ ಬಗೆಯ ಸಮಸ್ಯೆ ಇಲ್ಲ. 
 ನನ್ನ ವಯಸ್ಸು ಹೇಳಲು ನಾನು ಸದಾ ಸಿದ್ಧ. ಈ ವಯಸ್ಸಿನಲ್ಲಿ ನಾನು 16  ವರ್ಷದ ಹುದುಗಿಯಾಗಿಯೋ , 22  ವರ್ಷದ ಯುವತಿಯಾಗಿಯೋ ಕಂಡು ಬರಬೇಕೆಂದು ಏಕೆ ಪ್ರಯತ್ನ ಪಡಬೇಕು ? ಈ ಘಟ್ಟವನ್ನು ಸಹಿತ ನಾನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾಳೆ ಮಿಸೆಸ್ ಖಾನ್. 
 
ಈಗ ಈ ಘಟ್ಟ, ನಾಳೆ ನಲವತ್ತರ ಘಟ್ಟ, ಅದಾದ ಬಳಿಕ ಐವತ್ತರ ಘಟ್ಟವನ್ನು ಸಹಿತ ನಾನು ಆಸ್ವಾದಿಸುತ್ತೇನೆ.ಅದನ್ನು ಬಿಟ್ಟು ಚಿಕ್ಕ ವಯಸ್ಸಿನವಳಂತೆ ಆಗಲು ಯಾಕೆ ಒದ್ದಾಡ ಬೇಕು? ನಿಮಗೊಂದು ಸಂಗತಿ ತಿಳಿಸುತ್ತೇನೆ, ನನಗೆ ಈಗ 34 ವರ್ಷಗಳು ಅಲ್ಲವೇ, ಈ ವಯಸ್ಸಿನಲ್ಲಿ ನನಗೆ ಹರೆಯದ ಯುವತಿಯಂತೆ ಐಸ್ ಕ್ರೀಮ್ ಜಾಹೀರಾತಲ್ಲಿ ನಟಿಸಲು ಅವಕಾಶ ಸಿಗುತ್ತಿದೆ. ಅದೇ ನನ್ನ ಸಾಧನೆ ಎಂದು ತಿಳಿಯುತ್ತಿದ್ದೇನೆ. ಅಂದರೆ ಮುವ್ವತ್ತರ ಹರೆಯದಲ್ಲೂ ಸಹಿತ ನಾನು ಐಸ್ ಕ್ರೀಮ್ ಜಾಹೀರಾತಿಗೆ ಹೊಂದಿಕೆ ಯಾಗುತ್ತೀದ್ದೇನೆ ಎಂದು ಕೊಳ್ಳುತ್ತಿದ್ದಾರೆ ಕಂಪನಿಯವರು ಎಂದರೆ ಅದಕ್ಕಿಂತ ವಿಶೇಷತೆ ಮತ್ತೇನಿದೆ ? ಎಂದಿದ್ದಾಳೆ. ಅಲ್ಲದೆ ಬದುಕಿನಲ್ಲಿ ಮಾರ್ಪಾಟನ್ನು ಸಮ್ಮತಿಸ ಬೇಕು ಎನ್ನುವ ಮಾತನ್ನು ಸಹಿತ ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ