ಅಮಿತಾಬ್ ಸಲಹೆಯನ್ನು ಸದಾ ಪಾಲಿಸುತ್ತಿದೇನೆ: ಅನಿಲ್ ಕಪೂರ್

ಶುಕ್ರವಾರ, 29 ಮೇ 2015 (10:07 IST)
ಭಾರತೀಯ ಚಿತ್ರರಂಗದ ಎವರ್ ಗ್ರೀನ್ ನಟ ಅನಿಲ್ ಕಪೂರ್. ಈ ಮಿಸ್ಟರ್ ಇಂಡಿಯಾ ತಮ್ಮ ಚಾರ್ಮ್ ಇನ್ನು ಉಳಿಸಿಕೊಂಡಿದ್ದಾರೆ. ಅವರ ಜೊತೆ ಹಿರಿಕಿರಿಯರೆನ್ನದೆ ಎಲ್ಲಾ ನಟಿಯರು ಅಭಿನಯಿಸಿದ್ದಾರೆ. ಅವರು ಎಲ್ಲಾ  ಹೀರೋಯಿನ್ ಗಳಿಗೂ ಅಷ್ಟೊಂದು ಹೊಂದಿಕೆಯಾಗುವಂತಹ ಹೀರೋ.ನಟನೆಯಿಂದ ಎಂತಹ ಪರಿಸ್ಥಿತಿಯಲ್ಲೂ ಬ್ರೇಕ್ ತೆಗೆದುಕೊಳ್ಳದಿರು ಎಂದು ಅಮಿತಾಬ್ ಬಚ್ಚನ್ ಅವರು ತನಗೆ ಸಲಹೆ ನೀಡಿದ್ದರು ಎಂದು ಮಾಧ್ಯಮಗಳಿಗೆ ಅನಿಲ್ ಕಪೂರ್ ಅವರು ತಿಳಿಸಿದ್ದಾರೆ. ನಟನೆಯಿನ ವಿರಾಮ ತೆಗೆದುಕೊಂಡು ತಾನು ದೊಡ್ಡ ತಪ್ಪು ಮಾಡಿದ್ದೇನೆ. ನೀನು  ನನ್ನಂತೆ ತಪ್ಪು ಮಾಡದಿರು ಎಂದು ಬಿಗ್ ಬಿ ತಮ್ಮ ಸಹನಟ ಅನಿಲ್ ಕಪೂರ್ ಅವರಿಗೆ ಹೇಳಿದ್ದರಂತೆ. ಅವರು ನೀಡಿದ ಸಲಹೆಯಂತೆ ತಾನು ನಡೆಯುತ್ತಿರುವುದಾಗಿ ಹೇಳಿದ್ದಾರೆ.ಅಲ್ಲದೆ ಅಮಿತಾಬ್ ಬಚ್ಚನ್ ಅವರೆಂದರೆ ತನಗೆ ಬಹಳ  ಗೌರವ ಎಂದೂ ಸಹಿತ ತಿಳಿಸಿದ್ದಾರೆ. 
ನಾನು ನಟಿಸಿರುವ ಚಿತ್ರಗಳಲ್ಲಿ  ಯಾವುದು ಬೆಸ್ಟ್ , ಯಾವುದು ತುಂಬಾ ಕೆಟ್ಟದಾಗಿದೆ ಎನ್ನುವುದನ್ನು ತನಗೆ ಹೇಳಲಾಗುವುದಕ್ಕೆ ಸಾಧ್ಯವಿಲ್ಲ . ತನ್ನ ಕೆರಿಯರ್ ನಲ್ಲಿ ಕಷ್ಟಕಾಲ ಎದುರಾದಾಗ ಸಹಿತ ತಾನು ಬ್ರೇಕ್ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ  ಈ ರೇಸ್ ಹೀರೋ. ಅತ್ಯುತ್ತಮ ಚಿತ್ರಗಳಲ್ಲಿ ನಟಿಸಲು ಅವಕಾಶ ದೊರಕಿದ್ದು ತನ್ನ ಅದೃಷ್ಟ ಎನ್ನುವುದನ್ನು ಈ ಸಮಯದಲ್ಲಿ ಹೇಳಿದ್ದಾರೆ ಅನಿಲ್.

ವೆಬ್ದುನಿಯಾವನ್ನು ಓದಿ