ಮುಂದಿನ ಸಿಎಂ ಆಗುವ ಆ ನಟಿ ಯಾರು?
ಬೆಂಗಳೂರು: ನಾನೇ ನೆಕ್ಸ್ಟ್ ಸಿಎಂ ಅಂತಿದ್ದಾರೆ ಈ ನಟಿ. ಅವರು ರಾಗಿಣಿ ದ್ವಿವೇದಿ. ಅಚ್ಚರಿಯಾಗೋದು ಬೇಡ. ಹಾಗಂತ ಅವರು ಹೇಳಿದ್ದು ಅವರ ಮುಂದಿನ ಸಿನಿಮಾ ಟೈಟಲ್ ನನ್ನು. ನಾನೇ ಸಿಎಂ ಎನ್ನುವ ಅವರ ಹೊಸ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಯ್ತು.
ಸಾಮಾನ್ಯ ಕೂಡಾ ಅಸಾಮಾನ್ಯನಾಗಬಹುದು ಎಂಬುದೇ ಈ ಚಿತ್ರದ ಒನ್ ಲೈನ್ ಸ್ಟೋರಿಯಂತೆ. ಹಾಗಂತ ಸ್ವತಃ ರಾಗಿಣಿ ಹೇಳಿಕೊಂಡಿದ್ದಾರೆ. ಅಲ್ಲದೆ ಇದರಲ್ಲಿ ಕೊಂಚ ರಾಜಕಾರಣಿಯ ಲುಕ್ ಇರುವ ಪಾತ್ರವಂತೆ ಅವರದ್ದು.
ಡಿಸೆಂಬರ್ ಕೊನೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅಂತೂ ಎಲ್ಲಾ ವರ್ಗದ ಜನರೂ ನನಗೂ ಒಮ್ಮೆ ಅಧಿಕಾರ ಕೊಟ್ಟು ನೋಡಿ. ನಾನು ಸಮಾಜವನ್ನು ಹೇಗೆ ಬದಲಾಯಿಸ್ತೀನಿ ಅಂತ ಧ್ವನಿಯೇರಿಸುವ ಕೆಲವು ದೃಶ್ಯಗಳು ಟ್ರೇಲರ್ ನಲ್ಲಿ ಕಾಣ ಸಿಗುತ್ತವೆ.