ನನ್ನ ಸಿನಿ ಜರ್ನಿ ಇಲ್ಲಿಗೆ ಮುಗಿದಿಲ್ಲ: ಸಾಗರಿಕಾ ಘಾಟ್ಗೆ

ಶುಕ್ರವಾರ, 4 ಸೆಪ್ಟಂಬರ್ 2015 (09:40 IST)
ಚಕ್ ದೆ ಇಂಡಿಯಾ ಸಿನಿಮಾ ಗೊತ್ತಲ್ವಾ. ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿ ಬಾಕ್ಸ್ ಆಫೀಸ್ ಅನ್ನ ಧೂಳಿಪಟ ಮಾಡಿದ ಸಿನಾದವದು. ಅದ್ರಲ್ಲಿ ಮುಖ್ಯಪಾತ್ರ ನಿರ್ಮವಹಿಸಿದ ಸಾಗರಿಕಾ ಘಾಟ್ಗೆ ಕೂಡಾ ನಿಮಗೆ ಗೊತ್ತಿದೆ. ಆದ್ರೆ ಸಾಗರಿಕಾ ಇತ್ತೀಚೆಗೆ ಎಲ್ಲಿದ್ದಾರೆ. ಏನು ಮಾಡ್ತಿದ್ದಾರೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಫಸ್ಟ್ ಮೂವಿಯಲ್ಲೇ ಜಾಕ್ ಪಟ್ ಹೊಡೆದ್ರೂ ನಂತ್ರ ಅವರ ಸಿನಿಮಾ ಜೀವನ ಆರಕ್ಕೇಳಲಿಲ್ಲ ಮೂರಕ್ಕೆ ಇಳಿಯಲಿಲ್ಲ.
ಈಗ ಇದೇ ಸಾಗರಿಕಾ ಘಾಟ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚಕ್ ದೆ ಇಂಡಿಯಾ ಸಿನಿಮಾದಲ್ಲಿ ಪ್ರೀತಿಸಬರ್ ವಾಲ್ ಅನ್ನೋ ಹಾಕಿ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದ ಸಾಗರಿಕಾಗೆ ನಂತರದ ಸಿನಿಪಯಣ ಸಕ್ಸಸ್ ನಿಂದ ಕೂಡಿರಲಿಲ್ಲ. ಭರ್ಜರಿ ಸಕ್ಸಸ್ ಕಂಡ ಸಿನಿಮಾದಿಂದ ಸಾಗರಿಕಾಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತೆ ಅಂದುಕೊಂಡಿದ್ರು. ನಂತ್ರ ಕೆಲವು ವರ್ಷಗಳ ನಂತ್ರ ಘಾಟ್ಗೆ ಫಾಕ್ಸ್ ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಅದಾದ ಬಳಿಕ ಮತ್ತೆ ವಿರಾಮ ಪಡೆದು ಮಿಲೇ ನಾ ಮಿಲೇ ಹಮ್ ಅನ್ನೋ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಅದ್ಯಾವುದು ಅವರಿಗೆ ಮತ್ತೆ ಬಾಲಿವುಡ್ ನಲ್ಲಿ ಸಕ್ಸಸ್ ತಂದುಕೊಡಲಿಲ್ಲ. 
 
ಇದೀಗ ಸಿನಿಮಾದಲ್ಲಿ ಛಾನ್ಸ್ ಇಲ್ಲದಿರೋದ್ರಿಂದ ನನ್ನ ಸಿನಿಜರ್ನಿ ಇಲ್ಲಿಗೆ ಮುಗಿಯೋದಿಲ್ಲ ಅಂತ ಸಾಗರಿಕಾ ಹೇಳಿದ್ದಾರೆ. ಜನಮೆಚ್ಚುವಂತಹ ಪಾತ್ರಗಳಿಗೆ ಬಣ್ಣಹಚ್ಚೋದಕ್ಕೆ ಕಾಯ್ತಿದ್ದೀನಿ ಅಂದಿದ್ದಾರೆ. ಚಕ್ ದೆ ಇಂಡಿಯಾ ಒಬ್ಬ ಕಲಾವಿದೆಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದಂತಹ ಪಾತ್ರ ಆದ್ರೆ ಮತ್ತೆ ಅಂತಹ ಪಾತ್ರ ನನಗೆ ಸಿಗಲಿಲ್ಲ ಅಂತ ಸಾಗರಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ