'ಫ್ಯಾಂಟಮ್' ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಖುಷಿ ತಂದಿದೆ: ಸೈಫ್ ಆಲಿಖಾನ್

ಗುರುವಾರ, 3 ಸೆಪ್ಟಂಬರ್ 2015 (09:38 IST)
ಬಿಡುಗಡೆಯಾದ ಮೊದಲ ವಾರದಲ್ಲೇ ಭರ್ಜರಿ ಗಳಿಕೆ ಕಂಡಿರುವ ಫ್ಯಾಂಟಮ್ ಸಿನಿಮಾ ಸದ್ಯ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ವಿಶ್ವದಾದ್ಯಂತ ಸಿನಾಮಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಇದು ಸಿನಿಮಾದ ನಾಯಕ ಸೈಫ್ ಆಲಿಖಾನ್ ಅವರಿಗೆ ಸಂತಸ ನೀಡಿದೆ.
ಫ್ಯಾಂಟಮ್ ಸಿನಿಮಾ ಯಾವ ರೀತಿಯ ಸಿನಿಮಾ ಅನ್ನೋದು ಪ್ರೇಕ್ಷಕರ ರೆಸ್ಪಾನ್ಸ್ ನಿಂದ ಗೊತ್ತಾಗುತ್ತೆ ಅಂದಿರುವ ಸೈಫ್, ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ಗೆ ಇಡೀ ಸಿನಿಮಾ ತಂಡವೇ ಖುಷಿಯಾಗಿದೆ ಅಂತಾ ಸೈಫ್ ಹೇಳಿದ್ದಾರೆ.  ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ ಬರೋಬ್ಬರಿ 33.18 ಕೋಟಿ ಗಳಿಕೆ ಮಾಡಿದೆ.
 
ಕತ್ರೀನಾ ಕೈಫ್ ಹಾಗೂ ಸೈಫ್ ಆಲಿಖಾನ್ ಅಭಿನಯದ ಈ ಸಿನಿಮಾ  ಭಾರತ ಹಾಗೂ ಪಾಕ್ ನಡುವಿನ ಕಥಾ ಹಂದರವನ್ನೇ ಹೊಂದಿದೆ.  26/11  ಮುಂಬೈ ದಾಳಿಯನ್ನು ಆಧರಿಸಿ ನಿರ್ಮಾಣವಾಗಿದೆ.   ಯುದ್ಧ ಪೀಡಿತ ಸಿರಿಯಾದಲ್ಲಿ ಈ ಸಿನಿಮಾದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.  ಈ ಸಿನಿಮಾವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಪ್ರೀತಂ ಸಂಗೀತ ಸಂಯೋಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ