'ವಾಸ್ತುಪ್ರಕಾರ'ದ ಯಶಸ್ವಿ ಪ್ರದರ್ಶನ ಖುಷಿ ತಂದಿದೆ: ಪಾರುಲ್ ಯಾದವ್

ಗುರುವಾರ, 28 ಮೇ 2015 (10:40 IST)
ಸಕತ್ ಖುಷಿಯಾಗಿದೆ ಪಾರೂಲ್ ಯಾದವ್ ಅವರಿಗೆ. ಆ ರೀತಿ ಆಕೆಗೆ ಆನಂದ ಆಗಲು ಕಾರಣ ಇದೆ. ಪಾರುಲ್ ಯಾದವ್, ಐಶಿನಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ಜಗ್ಗೇಶ್ ಅಭಿನಯದ ಯೋಗರಾಜ್ ಭಟ್ ಅವರ ನಿರ್ದೇಶನದ ಹಾಸ್ಯಪ್ರಧಾನ ಚಿತ್ರ ವಾಸ್ತುಪ್ರಕಾರ. ಅದು ಹೇಳಿಕೊಳ್ಳುವಷ್ಟು ಗೆಲುವನ್ನು ಸಾಧಿಸಲಿಲ್ಲ. ಆದರೆ ಹಿತ್ತಲಗಿಡ ಮದ್ದಲ್ಲ ಎನ್ನುವಂತೆ ಇಲ್ಲಿನ ವಾಸ್ತುಪ್ರಕಾರ ಜಪಾನ್ ದೇಶದ  ಟೋಕಿಯೋದಲ್ಲಿ ಉತ್ತಮ ಫಲಿತಾಂಶ ಕಾಣುತ್ತಿದೆ. 
ಇದರ ಬಗ್ಗೆ ಟ್ವೀಟ್ ಮಾಡಿರುವ ಪಾರೂಲ್ ವಾಸ್ತುಪ್ರಕಾರ ಹೌಸ್ ಫುಲ್ ಆಗಿದೆ. ಸಕತ್ ಖುಷಿಯಾಗಿದೆ. ನಂಬೋಕೆ ಆಗ್ತಾ ಇಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ಆಸ್ಟ್ರೇಲಿಯ ಮತ್ತು ಯು ಎಸ್ ಎ ಹೆಚ್ಚು ಸದ್ದು ಮಾಡುತ್ತಿರುವ ಮತ್ತೊಂದು ಕನ್ನಡ ಚಿತ್ರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ. ಇದರಲ್ಲಿ ರಾಧಿಕ ಪಂಡಿತ್ ಮತ್ತು ಯಶ್ ಅಭಿನಯಿಸಿದ್ದಾರೆ. ಆ ಚಿತ್ರ ಪುನಃ ಕರ್ನಾಟಕದ ಕೆಲವು ಕಡೆ ರಿಲೀಜ್ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ