ಸಿನಿ ಪಯಣ ಆರಂಭಿಸಿ ಹದಿನೈದು ವರ್ಷಗಳಾಯ್ತು: ಅಭಿಷೇಕ್

ಗುರುವಾರ, 2 ಜುಲೈ 2015 (11:32 IST)
ದಿನಗಳು ಉರುಳುವುದಕ್ಕೆ ಯಾರ ನಿಯಂತ್ರಣವೂ ಬೇಕಿಲ್ಲ . ಏಕೆ ಈ ಮಾತನ್ನು ಹೇಳ್ತಾ ಇದ್ದೀವಿ ಎಂದರೆ ನಟ ಅಭಿಷೇಕ್  ಬಚ್ಚನ್ ಅವರು ಬಾಲಿವುಡ್ ಚಿತ್ರರಂಗಕ್ಕೆ ಬಂದು ಈಗ ಹದಿನೈದು ವರ್ಷಗಳು ಪೂರ್ಣವಾಗಿದೆ. ಈ ಖುಷಿಯನ್ನು ಅವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ರೆಫ್ಯೂಜಿ ಚಿತ್ರದ ಮೂಲಕ  ಇವರು ಸಿನಿರಂಗಕ್ಕೆ ಬಂದರು.ಆ ಚಿತ್ರದಲ್ಲಿ ಕರೀನಾ ಕಪೂರ್ ಅವರು ನಾಯಕಿ ಆಗಿದ್ದರು. ಆ ಬಳಿಕ ಅವರು ಎಲ್ಲ ಬಗೆಯ ಪಾತ್ರಗಳ ಮೂಲಕವೂ ಜನರ ಮುಂದೆ  ಬಂದು ಎಲ್ಲ ಪ್ರೀತಿ ಗಳಿಸಿದರು.
ಭಾರತೀಯ ಚಿತ್ರರಂಗದ ಅಪರೂಪದ ಕಲಾವಿದ ದಂಪತಿಗಳಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಚ್ಚನ್ ಅವರ ಮಗನಾದ ಈ ತಾರೆ ತನ್ನ ತಂದೆಯಷ್ಟು ಯಶಸ್ಸಿನ ರುಚಿ ಕಾಣಲಿಲ್ಲ. ಅವರು ಬಾಲಿವುಡ್ ನಲ್ಲಿ ಬಂಟಿ ಔರ್  ಬಬ್ಲಿ, ಗುರು, ದೋಸ್ತಾನ, ಪಾ ದಂತಹ ಚಿತ್ರಗಳ ಮೂಲಕ ತಮ್ಮ ಅಭಿನಯ ಚಾತುರ್ಯ ತೋರಿ ಎಲ್ಲರ ಮನ ಗೆದ್ದಿದ್ದರು. 
 
ತಮ್ಮ ಹದಿನೈದು ವರ್ಷಗಳ ಸಿನಿ ಪಯಣದ ಬಗ್ಗೆ ಟ್ವೀಟ್  ಮಾಡುತ್ತಾ  ನಾನು ಸಿನಿರಂಗಕ್ಕೆ ಬಂದು ಇಂದಿಗೆ 15 ವರ್ಷಗಳಾಯಿತು. ನನಗೆ ಬೆಂಬಲ ಹಾಗೂ ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಮ್ಮನ್ನು ಸಿನಿ ರಂಗಕ್ಕೆ ಪರಿಚಯಿಸಿ ಜೆ ಪಿ ದತ್ತ, ಅವರ ಸಹನಟಿ ಕರೀನಾ ಕಪೂರ್  ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಜೆಪಿ ಸಾಬ್ ಧನ್ಯವಾದಗಳು, ಅನುಪಮ್ ಖೇರ್, ಸುನೀಲ್ ಅಣ್ಣ , ನನ್ನ ಜೊತೆ ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಈಗ ಇಲ್ಲಿದ್ದೇನೆ ಎಂದರೆ ಅದಕ್ಕೆ ಕಾರಣ ನೀವು ಎಂದಿದ್ದಾರೆ. ನಮ್ಮ ಕಡೆಯಿಂದ ಈ ಪ್ರತಿಭಾವಂತ ನಟನಿಗೆ ವಿಷಸ್. 

ವೆಬ್ದುನಿಯಾವನ್ನು ಓದಿ