ನನಗೆ ಗ್ರಾಂಡ್ ಮಸ್ತಿಯಂತಹ ಸಿನಿಮಾಗಳನ್ನು ನೋಡಲಿಷ್ಟ ಆದರೆ ನಟಿಸಲು ಇಷ್ಟವಿಲ್ಲ

ಶನಿವಾರ, 25 ಅಕ್ಟೋಬರ್ 2014 (12:49 IST)
ತನಗೆ ಸೆಕ್ಸ್ ಕಾಮಿಡಿ ಅಂಶಗಳು ಒಳಗೊಂಡಿರುವ ಚಿತ್ರಗಳನ್ನು ನೋಡಲಿಷ್ಟ ಆದರೆ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲ್ಲ. ಗ್ರಾಂಡ್ ಮಸ್ತಿ ಯಂತಹ ಚಿತ್ರದ ಬಗ್ಗೆ ಮಾತನಾಡುತ್ತಾ ಈ ಸಂಗತಿ ತಿಳಿಸಿದ್ದಾರೆ 
 
ಬಿಗ್ ರಣಧೀರ್ ಕಪೂರ್. ಆದರೆ ನಾನು ಈ ರೀತಿಯ ಚಿತ್ರಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ. ನಾನು ಸೂಪರ್ ನಾನಿಯಂತಹ ಸಿನಿಮಾಗಳಲ್ಲಿ ನಟಿಸಲು ಆದ್ಯತೆ ಕೊಡ್ತೀನಿ. ಇದು ನನ್ನ ಬದುಕಿಗೆ ಹೊಂದಿಕೆಯಾಗಿರುವಂತಹ ವಿಷಯ ಹೊಂದಿದೆ ಎನ್ನುತ್ತಾರೆ ರಣಧೀರ್ ಕಪೂರ್. 
 
ದಿಲ್, ಮಸ್ತಿ, ಮತ್ತು ಗ್ರಾಂಡ್ ಮಸ್ತಿ ಚಿತ್ರಗಳ ನಿರ್ದೇಶಕ ಇಂದ್ರ ಕುಮಾರ್. ಅವರ ನಿರ್ದೇಶನದ ಸೂಪರ್ ನಾನಿಚಿತ್ರದಲ್ಲಿ ರಣಧೀರ್ ನಟಿಸಿದ್ದಾರೆ. 
 
ಸೂಪರ್ ನಾನಿ ಕೌಟುಂಬಿಕ ಕಥಾ ಹಂದರ ಇರುವ ಚಿತ್ರವಾಗಿದೆ. ನನಗೆ ಇಂದು ಜೊತೆಯಲ್ಲಿ ಕೆಲಸ ಮಾಡಲು ಸಕತ್ ಖುಷಿ ಇದೆ. ಆ ಚಿತ್ರದ ಪಾತ್ರ ಮತ್ತು ಹಣ ಎರಡು ಆಕರ್ಷಕವಾಗಿದೆ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ  ಇವರ ಜೊತೆ ರೇಖಾ ಮತ್ತು ಶರ್ಮನ್ ಜೋಷಿ ಸಹ ನಟಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ