ನನಗೆ ಮೊದಲಿನಿಂದಲೂ ಹಾಡುವ ಆಸೆ ಇತ್ತು ಅದು ಈಗ....?

ಸೋಮವಾರ, 22 ಡಿಸೆಂಬರ್ 2014 (09:24 IST)
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೀರೋ ಹೀರೋಯಿನ್ ಗಳು ಹಾಡುವುದು ಹೊಸ ಸಂಗತಿಯಲ್ಲ. ಕನ್ನಡದಲ್ಲಿ   ಉಪೇಂದ್ರ , ಪುನೀತ್ ರಾಜ್ ಕುಮಾರ್ ರಂತಹ ಟಾಪ್  ಹೀರೋಗಳು ಬೇರೆ ಕಲಾವಿದರ ಚಿತ್ರಗಳಿಗೆ ಹಾಡುತ್ತಿದ್ದಾರೆ. ಅದೇರೀತಿ  ಕೆಲವು ಹೀರೋಯಿನ್ ಗಳು ಸಹಿತ ಹಾಡನ್ನು ಹಾಡಿ ತಾವು ಹಾಡುವುದಕ್ಕೂ ಸೈ ಎಂದು ತೋರಿಸಿದ್ದಾರೆ. ಈ ಪರಂಪರೆ ಬಾಲಿವುಡ್ ನಲ್ಲೂ ಇದೆ.
ಬಾಲಿವುಡ್ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹ ಈಗ ಆ ಸಾಲಿಗೆ ಸೇರ್ಪಡೆ ಆಗಿದ್ದಾಳೆ. ಆಕೆ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ಈಗ ತೇವರ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹ ಹಾಡಿದ್ದಾಳೆ. ಲೆಟ್ಸ್ ಸೆಲಬ್ರೆಟ್ ಎನ್ನುವ ಹಾಡನ್ನು ಹಾಡಿದ್ದಾಳೆ. 
 
ಹಮ್ಟಿ ಶರ್ಮ ಕಿ ದುಲ್ಹನಿಯಾ ಚಿತ್ರದಲ್ಲಿ ಆಲಿಯ ಭಟ್  ಹಾಡಿದ್ದಳು. ಅಲ್ಲದೆ ಹೈದರ್ ಮತ್ತು ಏಕ್ ವಿಲನ್ ಚಿತ್ರಗಳಲ್ಲಿ ಶ್ರದ್ಧಾ ಕಪೂರ್ ಹಾಡಿದ್ದಳು. ಈಗ ತೇವರ್ ನಲ್ಲಿ ಸೋನಾಕ್ಷಿ ಹಾಡುತ್ತಿದ್ದಾಳೆ. ತನಗೆ ಹಾಡೋಕೆ ಇಷ್ಟ ಇತ್ತು ಮೊದಲಿಂದಲೂ. ಅದು ಈಗ  ನನಸಾಗಿದೆ ಅದನ್ನು ಹೊರೆತು ಪಡಿಸಿ ಯಾವ ರೀತಿಯಿಂದಲೂ ಬೇರೆಯವರೊಂದಿಗೆ ಸ್ಪರ್ಧೆಗೆ ಇಳಿದಿಲ್ಲ ಎಂದು ಹೇಳಿದ್ದಾಳೆ. 

ವೆಬ್ದುನಿಯಾವನ್ನು ಓದಿ