ನನಗೆ ಕರೀನಾ ಜೊತೆ ನಟಿಸಲು ಅಷ್ಟೇನೂ ಆತುರವಿಲ್ಲ..

ಶನಿವಾರ, 15 ನವೆಂಬರ್ 2014 (13:19 IST)
ಪತಿ ಪತ್ನಿಯರು ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುವುದು ಕಡಿಮೆ. ಈಗ ಸೈಫ್ ಅಲಿ ಖಾನ್ ಮತ್ತು ಕರೀನ ಕಪೂರ್ ಅವರ ವಿಷಯ ತಗೆದುಕೊಳ್ಳಿ. ಇಬ್ಬರು ಮದುವೆಯಾಗಿ ಆಗಲೇ ಎರಡು ವರ್ಷ ಪೂರ್ಣವಾಯ್ತು ಆದರು ಸಹಿತ ಈವರೆಗೂ ಒಟ್ಟಿಗೆ ಒಂದೂ ಚಿತ್ರದಲ್ಲೂ  ನಟಿಸಿಲ್ಲ. ಈಗ ಈ ಜೋಡಿಯು ಒಟ್ಟಿಗೆ ನಟಿಸುವ ಸಮಯ ಸನ್ನಿಹಿತವಾಗಿದೆ. ಅಂದರೆ, ಸೈಫ್ ಮತ್ತು ಕರೀನಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸೈಫ್ ನಟನೆಯ ಹ್ಯಾಪಿ ಎಂಡಿಂಗ್ ಚಿತ್ರದ ಬಳಿಕ ಈ ಜೋಡಿ ನಟಿಸಲಿದ್ದಾರೆ. 
 
ನನಗೆ ಆಕೆಯೊಂದಿಗೆ ನಟಿಸುವುದಕ್ಕೆ ಹೆಚ್ಚಿನ ಆತುರವಿಲ್ಲ. ತನ್ನ ಪತ್ನಿಯ ಜೊತೆ ಕೆಲಸ ಮಾಡಲು  ಯಾರೋ ಒಂದಿಬ್ಬರು ಮಾತ್ರ ಇಚ್ಚಿಸುತ್ತಾರೆ. ನಾನು ಬೇರೆ ಕಡೆ ಕೆಲಸ ಮಾಡಲು ಇಷ್ಟ ಪಡ್ತೀನಿ. ಹಾಗೂ ಮನೆಗೆ ಬಂದ ಬಳಿಕ ಅವಳನ್ನು ಭೇಟಿ ಮಾಡಲು ಇಷ್ಟ ಪಡ್ತೀನಿ ಎಂದು  ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ಸೈಫ್.
 
ರಾಜ್ ನಿಡಿಮೊರ್ ಮತ್ತು ಕೃಷ್ಣ ಡಿಕೆ ಅವರ ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಗೋವಿಂದ , ಕಲ್ಕಿ ಕೊಕ್ಲಿನ್ ಇಲಿಯಾನ  ಡಿ ಕ್ರೋಜ್ ಮುಂತಾದವರು ಸೈಫ್ ಜೊತೆ ನಟಿಸಿದ್ದಾರೆ. 
 
ಹ್ಯಾಪಿ ಎಂಡಿಂಗ್  ಹಾಸ್ಯ ಪ್ರಣಯಾಧಾರಿತ ಚಿತ್ರವಾಗಿದೆಯಂತೆ. ಈ ಮೊದಲು ಸೈಫ್ ಹಮ್ ಶಕಲ್ಸ್ ಮತ್ತು ಬುಲೆಟ್ ರಾಜ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದರಲ್ಲಿ ಮಾಜಿ  ಗೆಳತಿಯರು ಹಾಗು ಅದರಿಂದ ಆಗುವ ತೊಂದರೆ ಎದುರಿಸುವ  ಪಾತ್ರದಲ್ಲಿ ಇವರು ನಟಿಸುತ್ತಿದ್ದಾರಂತೆ. ಇದರ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ ಸೈಫ್. ಈ ಚಿತ್ರ ಮುಂಬರುವ ಶುಕ್ರವಾರ ಬಿಡುಗಡೆ ಆಗಲಿದೆ. 
 

ವೆಬ್ದುನಿಯಾವನ್ನು ಓದಿ