ಸಮಾಜ ಸೇವೆ ಮಾಡಬೇಕೆಂಬ ತುಡಿತ: ಶೃತಿ

ಬುಧವಾರ, 29 ಏಪ್ರಿಲ್ 2015 (10:04 IST)
ಕೆಟ್ಟಮಗನಿಗೆ ತಾಯಿಯಾಗಲು ಇಷ್ಟವಿಲ್ಲವಂತೆ ನಟಿ ಶ್ರುತಿಗೆ. ಈಗಾಗಲೇ ಏಳನೆ ತರಗತಿ ಓದುತ್ತಿರುವ ಮಗಳು ಇದ್ದಾಳೆ ಮತ್ತೊಂದು ಮಗನೆ ? ಹಾಗಾದರೆ ಆಕೆಗೆ ಮದುವೆ ಆಗಿದೆಯೇ ಮತ್ತೆ ಎನ್ನುವ ಪ್ರಶ್ನೆ ಕಾಡುತ್ತದೆ. 
ಆದರೆ ಶೃತಿ ರಿಯಲ್‌ನಲ್ಲಿ ಅಲ್ಲ ರೀಲ್ ನಲ್ಲಿ ಕೆಟ್ಟ ಮಗನಿಗೆ ತಾಯಿ ಆಗಲು ಇಷ್ಟ ಪಡುವುದಿಲ್ಲವಂತೆ. 1944 ಚಿತ್ರದಲ್ಲಿ ನಟಿಸುತ್ತಿರುವ ಶ್ರುತಿ ಹೇಳೋದಿಷ್ಟೇ ಸ್ವಾತಂತ್ರಕ್ಕಾಗಿ ಹೋರಾಟ ಮಾಡಲಿಲ್ಲ, ಆದರೆ ಅಂತಹ ಪಾತ್ರಗಳಲ್ಲಿ ನಟಿಸಲು ಖುಷಿ ಆಗುತ್ತದೆ. ಹೀಗಾದರೂ ದೇಶದ ಋಣ ತೀರಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
 
ಪುಟ್ಟಕ್ಕನ ಹೈವೆ ನಂತರ ಇದೇ ಚಿತ್ರ ನನಗೆ ಇಷ್ಟವಾಗಿದೆ. ಹದಿನೈದು ವರ್ಷ ಇರುವಾಗಲೆ ಮೂರು ಮಕ್ಕಳ ತಾಯಿಯಾಗಿ ನಟಿಸಿರುವ ಶೃತಿಗೆ ಈಗ  ಈಗ ತಾಯಿ ಪಾತ್ರ ಮಾಡಲು ಕಷ್ಟವೇನಿಲ್ಲ. ಆದರೆ ನಿರ್ದೇಶಕರು ಬಂದು ಕತೆ ಹೇಳುವಾಗ ನಾಯಕ ರೌಡಿ,ಪರೋಡಿ ಅಂತ ಬಿಂಬಿಸಿ ಅವರಿಗೆ ತಾಯಿ ಪಾತ್ರ ಮಾಡಬೇಕು ಅಂತ ಹೇಳುವಾಗ ಬೇಸರ ತರುತ್ತದೆಯಂತೆ. ನೂರೈವತ್ತು ಚಿತ್ರಗಳಲ್ಲಿ ನಟಿಸಿರುವ ಈ ತಾರೆಗೆ ಗೌರವಾನ್ವಿತ ಪಾತ್ರಗಳಲ್ಲಿ ನಟಿಸಬೇಕೆಂಬ ಬಯಕೆ ಇದೆಯಂತೆ. 
 
ತೆಲುಗು, ತಮಿಳಿನಲ್ಲಿ ಪೋಷಕ ಪಾತ್ರಗಳಿಗಂತಲೆ ಕತೆ ಸೃಷ್ಟಿಸುತ್ತಾರೆ. ನಮ್ಮಲ್ಲಿ ಪುರಷರಿಗೆ ಮಾತ್ರ ಇದೆ. ಹೊಸ ತಂತ್ರಜ್ಞರ ಚಿತ್ರದಲ್ಲಿ ನಟಿಸಲು ಆಸೆಯಂತೆ. ಯಾಕೆಂದರೆ ಅವರಿಗೆ ಹೊಸತನ ನೀಡುವ ತುಡಿತ ಇರುತ್ತದೆ ಎಂದು ಹೇಳಿದ್ದಾರೆ. ಬದುಕಿನಲ್ಲಿ ಎಲ್ಲ ಕಷ್ಟಗಳನ್ನು ಎದುರಿಸಿ ಈಗ ನೆಮ್ಮದಿಯ ಬದುಕಿನಲ್ಲಿ ಇರುವ ಶೃತಿಗೆ ಸಮಾಜ ಸೇವೆ ಮಾಡುವ ಬಗ್ಗೆ ಆಸಕ್ತಿ ಇದೆಯಂತೆ. 
 
ಒಟ್ಟಾರೆ ಕನ್ನಡ ಚಿತ್ರರಂಗದ ಅಳುಮುಂಜಿ ನಟಿ ಆ ಬಳಿಕ ಪ್ರೌಢ ಪಾತ್ರಗಳಲ್ಲೂ ಸಹಿತ ಕಂಡು ಬರುತ್ತಿದ್ದಾರೆ. ಗಟ್ಟಿಮೇಳ ಚಿತ್ರದಲ್ಲಿ ಆಕೆ ನಿರ್ಮಾಪಕಿಯಾಗಿ ತಾವು ಭಿನ್ನ ಎನ್ನುವುದನ್ನು ಸಾಬೀತು ಮಾಡಿದ್ದಾರೆ.  

ವೆಬ್ದುನಿಯಾವನ್ನು ಓದಿ