ಆಂಡ್ರೂ ಜೊತೆ ನನ್ನ ಲವ್ವಾ? ಯಾರು ಹೇಳಿದ್ದು.. ಆತ ಪುಟ್ಟ ಕಿಡ್

ಗುರುವಾರ, 16 ಅಕ್ಟೋಬರ್ 2014 (11:55 IST)
ಹೀರೋಯಿನ್‌ಳು ಮತ್ತು ಹೀರೋಗಳ ಮಾತು ಅಂತಿಮವಾಗಿ ಎಂತಹ ಫಲಿತಾಂಶ  ಪಡೆಯುತ್ತದೆ ಎಂದು ಸಾಕಷ್ಟು ಕಾಲ ಗೊತ್ತೇ ಆಗಲ್ಲ. ಹಾಗೆ ಆಗಿದೆ ಇಲಿಯಾನ ವಿಷಯದಲ್ಲೂ ಸಹಿತ. ಆರಂಭಿಕ ಹಂತದಲ್ಲಿ ಟಾಲಿವುಡ್ ಮೂಲಕ ಬಣ್ಣದ ಬದುಕನ್ನು ನಿರೂಪಿಸಿಕೊಂಡ ಇಲಿಯಾನ ನಂತರ ಬಾಲಿವುಡ್ ಕಡೆಗೆ ಜಿಗಿದು ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹ , ಸೋನಂ ಕಪೂರ್ ರಂತಹ ಹೀರೋಯಿನ್‌ಗಳ ಎದುರು ಸ್ಪರ್ಧೆಗೆ ಇಳಿದು ಸಂಪೂರ್ಣವಾಗಿ ಬಾಲಿವುಡ್ ನವಳೇ ಆಗಿದ್ದಾಳೆ. ಆದರೆ ಇತ್ತೀಚೆಗೆ ಆಕೆಯ ಬಗ್ಗೆ ಅನೇಕ ವದಂತಿಗಳು ಹರಡಿತ್ತು. 
 
ಆಸ್ಟ್ರೇಲಿಯಾದ  ಆಂಡ್ರೂ ಜೊತೆ ಈಕೆ ಲವ್ ಮಾಡುತ್ತಿದ್ದಾಳೆ ಮತ್ತು ಮದುವೆ ಆಗಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾಳೆ ಎಂದು ಸುದ್ದಿ ಹರಡಿತ್ತು. ಅವರಿಬ್ಬರೂ ಪಾರ್ಕು, ಹೋಟೆಲ್, ಮಾಲ್ , ಪಬ್ ಎಲ್ಲ ಕಡೆ ಓಡಾಡುತ್ತಾ ಸಮಯ ಕಳೆಯುತ್ತಿದ್ದಾರೆ ಎನ್ನುವ ವದಂತಿಯೂ ಸಹಿತ ಜೋರಾಗಿ ಸದ್ದು ಮಾಡಿತ್ತು. ಆದರೆ ಈವರೆಗೂ ಆ ಸುದ್ದಿಗಳ ಬಗ್ಗೆ ಯಾವುದೇ ರೀತಿಯಲ್ಲೂ ಆಕೆ ಪ್ರತಿಕ್ರಿಯೆ ನೀಡಿರಲೇ ಇಲ್ಲ. 
 
ಆದರೆ ಈಗ ಮಾತಾಡಿದ್ದಾಳೆ.. ನಾನು ಆಂಡ್ರೂ ಜೊತೆ ಲವ್ ಮಾಡ್ತಾ ಇದ್ದಿನಾ? ರೋಮ್ಯಾನ್ಸ್ ಅ.. ಅ..? ನೋ ಚಾನ್ಸ್  . ಆತನನಗಿಂತ ಹದಿನೈದು ವರ್ಷಗಳಷ್ಟು ಕಿರಿಯ. ಆದರೆ ಆತನ ಜೊತೆ ಪಬ್ಬು, ಪಾರ್ಕಿನಲ್ಲಿ ಓಡಾಡುತ್ತಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾಳೆ ಈಕೆ. ಆಂಡ್ರೂ ಒಳ್ಳೆಯ ಹುಡುಗ. ಅವನಿಗೆ ಹೆಣ್ಣುಮಕ್ಕಳನ್ನು ಕಂಡರೆ ಗೌರವ. ನಮ್ಮಿಬ್ಬರ ನಡುವೆ ವೇವ್ ಲೆನ್ತ್ ಚೆನ್ನಾಗಿದೆ. ಆದ್ದರಿಂದ ಆತನ ಜೊತೆ ನಾನು ಫ್ರೆಂಡ್ ಶಿಪ್ ಮಾಡಿದ್ದೇನೆ. 
 
ಆತ ನನಗೆ ಅತ್ಯುತ್ತಮ ಸ್ನೇಹಿತ. ಮತ್ತೊಂದು ಸಂಗತಿ ಸಧ್ಯದಲ್ಲೇ ನಾನು ಯಾರಾದರೊಬ್ಬನನ್ನು ಮದುವೆ ಆಗ್ತೀನಿ. ಆಗ ನಿಮ್ಮನ್ನೆಲ್ಲ ಕರೆಯುತ್ತೇನೆ ಎಂದಿರುವ ಈ ಚೆಲುವೆ ಬಳಿ ಮಾಧ್ಯಮದವರು ಆಂಡ್ರೂ ವಿಷಯ ಬಿಡಮ್ಮ  ಬೇಡ ನಮಗೆ,   ಬೇರೆ ಯಾರಾದ್ರು ನಿನ್ನ ಮನ ಕದ್ದಿದ್ದಾರಾ ಅಂತ ಪ್ರಶ್ನೆ ಕೇಳಿದರೆ ಆಕೆ ಕಡೆಯಿಂದ ಮೌನದ ಉತ್ತರ .. ಇಷ್ಟಾದರೂ ಸಹಿತ ಈ ಜೋಡಿ ನಡುವೆ ಕುಚ್ ಕುಚ್ ನಡೀತಾ ಇದೆ ಎನ್ನುವ ಸಂದೇಹ ಎಲ್ಲರಲ್ಲೂ ಇದೆ.. ಸಧ್ಯಕೆ ಸಂದೇಹ ಮಾತ್ರ ಇದೆ ಅಷ್ಟೇ !!
 

ವೆಬ್ದುನಿಯಾವನ್ನು ಓದಿ