ನಾನು ಕರೀನಾ ಕಪೂರ್ ಬಗ್ಗೆ ತುಂಬಾ ಯೋಚಿಸುತ್ತೇನೆ- ಶಾಹೀದ್ ಕಪೂರ್

ಬುಧವಾರ, 25 ನವೆಂಬರ್ 2015 (11:21 IST)
ಕರೀನಾ ಹಾಗೂ ಶಾಹೀದ್ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್ ನ ಜೋಡಿ ಹಕ್ಕಿಗಳು. ಇನ್ನೇನು ಅವರಿಬ್ಬರು ಸಪ್ತಪದಿ ತುಳಿಯುತ್ತಾರೆ ಎಲ್ಲರೂ ಅಂದುಕೊಂಡಾಗಲೇ ಅವರಿಬ್ಬರು ಪರಸ್ಪರ ದೂರವಾಗಿದ್ದರು. ಅವರಿಬ್ಬರ ಅಭಿನಯದ ಜಬ್ ವಿ ಮೆಟ್ ಸಿನಿಮಾವಂತೂ ಇಂದಿಗೂ ಎವರ್ ಗ್ರೀನ್. ಆದ್ರೆ ಪರಸ್ಪರ ದೂರವಾದ ಬಳಿಕ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿಲ್ಲ. ಆದರೆ ಶಾಹೀದ್ ಜೊತೆ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಕಾಣಿಸಿಕೊಳ್ಳುತ್ತಾರೆ ಅಂತಾ ಸುದ್ದಿಯಾಗಿತ್ತು. ಆದ್ರೆ ಅದು ಕೂಡ ಈಡೇರಿರಲಿಲ್ಲ.

ಅಚ್ಚರಿ ಸಂಗತಿ ಅಂದ್ರೆ ಶಾಹೀದ್ ಕೂಡ ತಮ್ಮ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಕಪೂರ್ ಅವರೇ ಅಭಿನಯಿಸಬೇಕು ಅಂದುಕೊಂಡಿದ್ದರಂತೆ. ಅದಕ್ಕಾಗಿ ಕರೀನಾ ಅವರನ್ನು ಅಪ್ರೋಚ್ ಕೂಡ ಮಾಡಲಾಗಿತ್ತಂತೆ.ಆದ್ರೆ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಳ್ಳದೇ ಇದ್ದುದರಿಂದ ಆಲಿಯಾ ಭಟ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಲಾಯಿತಂತೆ. 
 
ಆದರೆ ಶಾಹೀದ್ ಕಪೂರ್ ಅವರಿಗೆ ಇಂದಿಗೂ ಕರೀನಾ ಕಪೂರ್ ಜೊತೆ ಅಭಿನಯಿಸೋದು ಅಂದ್ರೆ ತುಂಬಾನೇ ಇಷ್ಟವಂತೆ. ಒಬ್ಬ ನಟನಾಗಿ ನಾನು ಕರೀನಾ ಅವರ ಬಗ್ಗೆ ತುಂಬಾನೇ ಯೋಚಿಸುತ್ತೇನೆ. ಉಡ್ತಾ ಪಂಜಾಬ್ ಸಿನಿಮಾದಲ್ಲಿ ಅವರು ನಟಿಸುತ್ತಿದ್ದರೆ ತುಂಬಾನೇ ಚೆನ್ನಾಗಿರುತ್ತಿತ್ತು ಅಂತಾ ಶಾಹೀದ್ ಕಪೂರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ