ಆ ಚಿತ್ರದಲ್ಲಿ ಆಕೆ ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ಅಭಿನಯಿಸಿದ್ದಳು. ಆದರೆ ಆ ಚಿತ್ರ ಹೇಳ ಹೆಸರಿಲ್ಲದೆ ಸೋತು ನೆಲ ಕಚ್ಚಿತು. ಈಗಾಗಲೇ ಹಿಂದಿಯಲ್ಲಿ ಸಾಜಿದ್ ಖಾನ್ ಅವರ ನಿರ್ದೇಶನದ ಹಮ್ಷಕಲ್ ಚಿತ್ರದಲ್ಲಿ ಸೋಲು ಕಂಡಿದ್ದ ತಮ್ಮುಗೆ ಈ ಚಿತ್ರದ ಸೋಲು ಬೇಸರ ಉಂಟು ಮಾಡಿತ್ತು. ಆದರೆ ಇವೆಲ್ಲ ಪಕ್ಕಕ್ಕೆ ಇಟ್ಟು ಆಕೆ ಮಹೇಶ್ ಬಾಬು ಅವರನ್ನು ಹೊಗಳೋಕೆ ಆರಂಭ ಮಾಡಿದ್ದಾಳೆ.