ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸ್ತಾರಂತೆ ನಿಧಿ ಸುಬ್ಬಯ್ಯ

ಶುಕ್ರವಾರ, 18 ಡಿಸೆಂಬರ್ 2015 (10:41 IST)
ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್ ಸಿನಿಮಾಗಳ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ನಟಿ ನಿಧಿ ಸುಬ್ಬಯ್ಯ. 2012ರಲ್ಲಿ ತೆರೆ ಕಂಡ ಅಣ್ಣಾ ಬಾಂಡ್ ಸಿನಿಮಾದ ಬಳಿಕ ನಿಧಿ ಕನ್ನಡದ ಮತ್ತ್ಯಾವುದೇ ಸಿನಿಮಾದಲ್ಲೂ ಅಭಿನಯಿಸಲ್ಲ. ಬಾಲಿವುಡ್ ಗೆ ಹಾರಿದ್ರು. ಆದ್ರೀಗ ಬಾಲಿವುಡ್ ನಲ್ಲಿ ಸಿನಿಮಾ ಮಾಡಿ ಇದೀಗ ಮತ್ತೆ ನಿಧಿ ಕನ್ನಡ ಸಿನಿಮಾರಂಗಕ್ಕೆ ಬಂದಿದ್ದಾರೆ.

 
ಇದೀಗ ನಿಧಿ ಸುಬ್ಬಯ್ಯ ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಾರಂತೆ.ಬಾಲಿವುಡ್ ಈಗಾಗಲೇ ನಿಧಿ ಸುಬ್ಬಯ್ಯ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರಂತೆ. ಅವುಗಳು ಮುಂದಿನ ವರ್ಷ ರಿಲೀಸ್ ಆಗುತ್ತವೆಯಂತೆ. ಇನ್ನು ಕನ್ನಡದಲ್ಲಿ ನಿಧಿ ಸುಬ್ಬಯ್ಯ ಅಭಿನಯಿಸುತ್ತಿರೋದು ವಿಜಯರಾಘವೇಂದ್ರ ಅವರ ಜೊತೆ.ನನ್ನ ನಿನ್ನ ಪ್ರೇಮ ಕಹಾನಿ ಸಿನಿಮಾದಲ್ಲಿ ನಿಧಿ ಹಾಗೂ ವಿಜಯ್ ರಾಘವೇಂದ್ರ ಜೊತೆಯಾಗಿ ನಟಿಸುತ್ತಿದ್ದಾರೆ.
 
ಈಗಾಗಲೇ ಸಿನಿಮಾದ ಸ್ರ್ಕಿಫ್ಟ್ ನಿಧಿ ಸುಬ್ಬಯ್ಯ ಅವರಿಗೆ ತುಂಬಾನೇ ಇಷ್ಟವಾಗಿದೆಯಂತೆ.ಇನ್ನು ಸಿನಿಮಾವನ್ನು ಆದಷ್ಟು ಬೇಗ ಮುಗಿಸೋದರಲ್ಲಿ ಇದ್ದಾರಂತೆ ನಿಧಿ ಸುಬ್ಬಯ್ಯ. ಯಾಕಂದ್ರೆ ನಿಧಿ ಅವರಿಗೆ ಇನ್ನೂ  ಎರಡು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಅವತಕಾಶ ಸಿಕ್ಕಿದೆಯಂತೆ. ಇದರ ನಡುವೆ ಬಿಡುವು ಮಾಡಿಕೊಂಡು ನಿಧಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ